IPL 2022 | ಮುಂಬೈ ಗೆಲ್ಲಬೇಕು ಅಂದ್ರೆ ಆತ ಅಖಾಡಕ್ಕಿಳಿಯಬೇಕು
ಐಪಿಎಲ್-2022ರಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನ ನೀಡುತ್ತಿದೆ.
ಮುಂಬೈ ಈ ಋತುವಿನಲ್ಲಿ ಸತತ ಮೂರು ಪಂದ್ಯಗಳ ಸೋಲಿನ ಅವಮಾನದಿಂದ ತತ್ತರಿಸಿದೆ.
ಮುಂಬೈ ತಂಡ ಬ್ಯಾಟಿಂಗ್ ನಲ್ಲಿ ಮಿಂಚುತ್ತಿದ್ದರೂ ಪೇಸ್ ಬೌಲಿಂಗ್ ನಲ್ಲಿ ಮಿಂಚುತ್ತಿಲ್ಲ.
ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಉಳಿದೆಲ್ಲ ಬೌಲರ್‌ಗಳು ರನ್‌ಗಳನ್ನು ಬಿಟ್ಟುಕೊಡುತ್ತಿದ್ದಾರೆ.
ಇದೇ ವಿಚಾರವಾಗಿ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈ ಅಂತಿಮ ತಂಡದಲ್ಲಿ ಜಯದೇವ್ ಉನದ್ಕತ್ ಅವರನ್ನು ಸೇರಿಸಿಕೊಳ್ಳುವಂತೆ ಸೆಹ್ವಾಗ್ ಸಲಹೆ ನೀಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಐದು ವಿಕೆಟ್ ಪಡೆದಿರುವ ಉನದ್ಕತ್ ಅವರನ್ನು ಬೆಂಚ್ ಗೆ ಸೀಮಿತ ಮಾಡಿರೋದು ಯಾಕೆ ಅಂತಾ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಕಳೆದ ಋತುವಿನವರೆಗೂ ನಾಥನ್ ಕೌಲ್ಟರ್ ನೈಲ್ ಮುಂಬೈ ತಂಡದ ಭಾಗವಾಗಿದ್ದರು.
ತಂಡದಲ್ಲಿರುವ ಯಾವುದೇ ಬೌಲರ್ ಉತ್ತಮ ಪ್ರದರ್ಶನ ನೀಡದಿದ್ದರೆ ಅಥವಾ ಗಾಯಗೊಂಡರೆ ಕೌಲ್ಟರ್ ನೈಲ್ ತಂಡವನ್ನು ಸೇರಿಕೊಳ್ಳುತ್ತಾರೆ.
ಆದರೆ ಇದೀಗ ಅಂತಿಮ ತಂಡದಲ್ಲಿ ಬೆಂಚ್‌ನಲ್ಲಿರುವವರಿಗೆ ಅವಕಾಶ ನೀಡಲು ಮುಂಬೈ ಮ್ಯಾನೇಜ್‌ಮೆಂಟ್ ಹಿಂದೆ ಮುಂದೆ ನೋಡುತ್ತಿದೆ.
ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್, ರಿಲೆ ಮೆರೆಡಿತ್ ಮತ್ತು ಅರ್ಷದ್ ಖಾನ್ ಅವರಂತಹವರು ಇನ್ನೂ ಬೆಂಚ್‌ಗೆ ಸೀಮಿತರಾಗಿದ್ದಾರೆ.
ಇದಲ್ಲದೇ ಯುವ ವೇಗಿಗಳಾದ ಸಂಜಯ್ ಯಾದವ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್ ಕೂಡ ತಂಡದಲ್ಲಿದ್ದಾರೆ ಎಂದಿದ್ದಾರೆ ಸೆಹ್ವಾಗ್. Virender Sehwag urged MI to induct Jaydev Unadkat into the playing XI









