ADVERTISEMENT
Monday, October 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅನಿಲ್ ಕುಂಬ್ಳೆ ನಾನು ಕಂಡ ದಿ ಬೆಸ್ಟ್ ಕ್ಯಾಪ್ಟನ್ – ವಿಜಯ್ ಭಾರದ್ವಾಜ್…

admin by admin
May 26, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ವಿಜಯ್ ಭಾರದ್ವಾಜ್… ಕರ್ನಾಟಕದ ಪ್ರತಿಭಾನ್ವಿತ ಆಲ್ ರೌಂಡರ್. ಆಡಿರುವುದು ಸುಮಾರು ಹತ್ತು ವರ್ಷಗಳಾದ್ರೂ ಮಾಡಿರುವ ಸಾಧನೆ ಅಷ್ಟಿಷ್ಟಲ್ಲ. 1993-94ರಲ್ಲಿ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿರುವ ವಿಜಿ, ದೇಸಿ ಕ್ರಿಕೆಟ್‍ನಲ್ಲಿ ಆಲ್‍ರೌಂಡ್ ಪ್ರದರ್ಶನದ ಮೂಲಕ ಮಿಂಚು ಹರಿಸಿದ್ದರು. ಅಲ್ಲದೆ ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆದುಕೊಳ್ಳಲು ಯಶಸ್ವಿಯಾದ್ರು. ಚೊಚ್ಚಲ ಏಕದಿನ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವಿಜಯ್ ಅವರು ಸಾಕಷ್ಟು ಭರವಸೆ ಮೂಡಿಸಿದ್ದರು. ಆದ್ರೆ ಬೆನ್ನು ನೋವಿನಿಂದಾಗಿ ಕ್ರಿಕೆಟ್‍ನಿಂದಲೇ ದೂರ ಸರಿಯಬೇಕಾಯ್ತು.

saakshatv.com ನ ವಿಶೇಷ ಕಾರ್ಯಕ್ರಮ ಸೂಪರ್ ಓವರ್ ನೇರ ಪ್ರಸಾರದಲ್ಲಿ ಮಾತನಾಡಿದ ವಿಜಯ್ ಭಾರದ್ವಾಜ್ ಅವರು ತಮ್ಮ ಕ್ರಿಕೆಟ್ ಬದುಕಿನ ಅನೇಕ ಘಟನೆಗಳನ್ನು ನೆನಪಿಸಿಕೊಂಡ್ರು. ಬೆಂಗಳೂರಿನಲ್ಲಿ ಕ್ರಿಕೆಟ್ ಪವರ್ ಹೌಸ್ ಆಗಿದ್ದ ಬಸವನಗುಡಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ತನಕ ಬೆಳೆದು ಬಂದ ಹಾದಿಯನ್ನು ಸಿಂಹಾವಲೋಕನ ಮಾಡಿಕೊಂಡ್ರು. ಜಿ.ಆರ್.ವಿಶ್ವನಾಥ್, ಸದಾನಂದ್ ವಿಶ್ವನಾಥ್, ರಘುರಾಮ್ ಭಟ್, ಸುಧಾಕರ್ ರಾವ್ ಹೀಗೆ ಹಿರಿಯ ಆಟಗಾರರನ್ನು ನೋಡುತ್ತಲೇ ಕ್ರಿಕೆಟ್ ಆಟದತ್ತ ಆಕರ್ಷಿತರಾದ ವಿಜಿ ಅವರು 16 ವಯೋಮಿತಿ ಕ್ರಿಕೆಟ್ ಟೂರ್ನಿಯ ಮೂಲಕ ರಾಜ್ಯ ಕ್ರಿಕೆಟ್ ತಂಡದ ಕದ ತಟ್ಟಲು ಶುರು ಮಾಡಿದ್ದರು. ಆದ್ರೆ ಹಿರಿಯ ಆಟಗಾರರ ಪ್ರಭಾವಳಿಯ ಮುಂದೆ ದೇಸಿ ತಂಡದಲ್ಲಿ ಸ್ಥಾನ ಪಡೆಯಲು ಕೆಲವು ಸಮಯ ಕಾಯಬೇಕಾಯ್ತು.

Related posts

ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ

ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ

October 18, 2026
ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

October 18, 2026

ಆದ್ರೆ ರಾಜ್ಯ ತಂಡಕ್ಕೆ ಎಂಟ್ರಿಯಾದ ನಂತರ ವಿಜಯ್ ಭಾರದ್ವಾಜ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಮೂರು ರಣಜಿ ಟ್ರೋಫಿ ಗೆದ್ದ ತಂಡದಲ್ಲಿದ್ದ ವಿಜಿ ಅವರು ಆ ದಿನಗಳಲ್ಲಿ ನಡೆದಿರುವಂತಹ ಕೆಲವೊಂದು ಸ್ವಾರಸ್ಯಕರವಾದ ಸನ್ನಿವೇಶಗಳನ್ನು ನೆನಪಿಸಿದ್ರು. ಹೈದ್ರಬಾದ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ದೊಡ್ಡಗಣೇಶ್ ಗೆಲುವಿನ ರೂವಾರಿಯಾಗಿದ್ದು, ನಾಯಕ ರಾಹುಲ್ ದ್ರಾವಿಡ್ ಒತ್ತಡದಲ್ಲಿ ಸಿಲುಕಿದ್ದಾಗ ಬೈದಿರುವುದು, ಸಿರಗುಪ್ಪಿ, ಸುನೀಲ್ ಜೋಷಿ ಔಟಾದಾಗ ರಾಹುಲ್ ದ್ರಾವಿಡ್ ಅವರ ರಿಯಾಕ್ಷನ್ ಹೇಗಿತ್ತು, ತಿಲಕ್ ನಾಯ್ಡು ಬೌಲಿಂಗ್, ಅಪತ್ಬಾಂದವ ಸುನೀಲ್ ಜೋಷಿ ಬ್ಯಾಟ್ ಮತ್ತು ಚೆಂಡಿನಲ್ಲಿ ಹೇಗೆ ತಂಡಕ್ಕೆ ಸಹಕಾರಿಯಾಗುತ್ತಿದ್ದರು ಎಂಬುದನ್ನು ಇದೇ ವೇಳೆ ಹೇಳಿಕೊಂಡ್ರು. ಹಾಗೇ ದೊಡ್ಡ ಗಣೇಶ್ ಮತ್ತು ಸಿದೂ ನಡುವಿನ ಜಟಾಪಟಿಯ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ನಾನು ಏನು ಗೌತಮ ಬುದ್ದನಲ್ಲ. ಅವನು ಬೈದ್ರೂ ನಾನು ಸುಮ್ಮನಿರಬೇಕಾ… ನಾನು ಅವನಿಗೆ ವಾಪಸ್ ಕೊಟ್ಟೆ ಕೊಡುತ್ತೇನೆ ಎಂದು ಸಿದೂ ಗಣೇಶ್‍ಗೆ ಹೇಳಿದ್ದರು. ಆದ್ರೆ ಆ ಪಂದ್ಯದಲ್ಲಿ ತನ್ನ ರಿವರ್ಸ್ ಸ್ವಿಂಗ್ ಬೌಲಿಂಗ್ ಮೂಲಕವೇ ಗಣೇಶ್ ಅವರು ಸಿದೂ ಅವರ ಬಾಯಿ ಮುಚ್ಚಿಸಿದ್ರು ಎಂದರು. ಇನ್ನು ಚೊಚ್ಚಲ ರಣಜಿ ತಂಡವನ್ನು ಆಡುವಾಗ ಮತ್ತು ಟೀಮ್ ಇಂಡಿಯಾ ಕ್ಯಾಪ್ ಧರಿಸುವ ಆಗಿರುವ ಸಂಭ್ರಮವನ್ನು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ ಎಂದ್ರು. ಹಾಗೇ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿ ಸಹ ಆಟಗಾರರನ್ನು ಯಾವ ರೀತಿ ಪ್ರೇರಣೆ ನೀಡುತ್ತಿದ್ದರು ಎಂಬುದನ್ನು ಸಹ ಇದೇ ಉಲ್ಲೇಖಿಸಿದ್ರು. ಅದೂ ಅಲ್ಲದೆ ತನಗೆ ಬೆನ್ನು ನೋವು ಇದ್ದಾಗ ಸೌರವ್ ಗಂಗೂಲಿ ನೀಡಿರುವ ಬೆಂಬಲ, ಅವರು ಹೇಳಿರುವ ಮಾತುಗಳು ಇನ್ನೂ ನನಗೆ ನೆನಪಿನಲ್ಲಿದೆ. ಆದ್ರೆ ನನ್ನ ದುರಾದೃಷ್ಟ ಬೆನ್ನು ನೋವು ನನ್ನ ಕ್ರಿಕೆಟ್ ಬದುಕನ್ನು ಕಿತ್ತುಕೊಂಡಿತ್ತು ಎಂದು ಬೇಸರದಿಂದಲೇ ಹೇಳಿದ್ರು.

ಹಾಗೇ ಧೋನಿಯ ಬಗ್ಗೆ ಮಾತನಾಡಿದ ವಿಜಿ, ಬಿಹಾರ ವಿರುದ್ಧದ ಪಂದ್ಯದಲ್ಲಿ ಧೋನಿ, ಸುನೀಲ್ ಜೋಷಿಗೆ ಬಲಿಯಾಗಿದ್ದರು. ಆಗ ಧೋನಿಯ ಬಗ್ಗೆ ಬಿಹಾರ ತಂಡದಲ್ಲಿದ್ದ ನನ್ನ ಗೆಳೆಯ ಸಾಕಷ್ಟು ಬಿಲ್ಡ್ ಅಪ್ ಕೊಟ್ಟಿದ್ದ. ಸುನೀಲ್ ಜೋಷಿ ಎಸೆತಕ್ಕೆ ಔಟಾದಾಗ ತನ್ನ ಗೆಳೆಯನನ್ನು ನಾನು ಅಣಕಿಸಿದ್ದೆ. ಆದ್ರೆ ಎರಡನೇ ಇನಿಂಗ್ಸ್ ನಲ್ಲಿ ಧೋನಿ ಎಲ್ಲವನ್ನೂ ಉಲ್ಟಾಪಲ್ಟಾ ಮಾಡಿದ್ರು. 40 ಎಸೆತಗಳಲ್ಲಿ ಸುಮಾರು 90 ರನ್ ಸಿಡಿಸಿದ್ರು. ಆಗ ಧೋನಿ ಆಡ್ತಾನೆ ಅಂದಾಗ ಸುಮಾರು ಹತ್ತು ಸಾವಿರ ಜನ ಸೇರುತ್ತಿದ್ದರು. ಆದ್ರೆ ಧೋನಿ ಔಟಾಗುತ್ತಿದ್ದಂತೆ ಎಲ್ಲರೂ ಜಾಗ ಖಾಲಿ ಮಾಡಿದ್ದರು. ಆಗಲೇ ಧೋನಿಯ ಪ್ರತಿಭೆ ಹಾಗೂ ಟೀಮ್ ಇಂಡಿಯಾದಲ್ಲಿ ಮಿಂಚು ಹರಿಸ್ತಾನೆ ಅಂತ ಅಂದುಕೊಂಡಿದ್ದೆ ಎಂದು ಧೋನಿಯ ನಾಯಕತ್ವ, ವ್ಯಕ್ತಿತ್ವವನ್ನು ವಿಜಯ್ ಭಾರದ್ವಾಜ್ ಬಣ್ಣಿಸಿದ್ರು.

ಇನ್ನು ಅನಿಲ್ ಕುಂಬ್ಳೆ.. ಕರ್ನಾಟಕ ಕ್ರಿಕೆಟ್ ತಂಡವನ್ನು 90ರ ದಶಕದಲ್ಲಿ ಉತ್ತುಂಗಕ್ಕೇರಿಸಲು ಅನಿಲ್ ಕುಂಬ್ಳೆಯ ಕಾಣಿಕೆ ಅಪಾರವಾದದ್ದು. ಅನಿಲ್ ಜೊತೆ ಶ್ರೀನಾಥ್, ವೆಂಕಿ, ಸುಜೀತ್, ಜಸ್ವಂತ್, ಅರುಣ್ ಕುಮಾರ್, ಸುನೀಲ್ ಕುಮಾರ್ ಹೀಗೆ ಸಾಲು ಸಾಲು ಯುವ ಆಟಗಾರರ ಪ್ರತಿಭೆ ಅನಾವರಣಗೊಂಡಿತ್ತು. 90ರ ದಶಕದಲ್ಲಿ ಕರ್ನಾಟಕ ತಂಡ ಅಂದ್ರೆ ಅದು ಭಾರತ ತಂಡದಷ್ಟೇ ಬಲಿಷ್ಠವಾಗಿತ್ತು. ಅದ್ರಲ್ಲೂ ಅನಿಲ್ ಕುಂಬ್ಳೆ ಅವರ ನಾಯಕತ್ವದ ಬಗ್ಗೆ ಎರಡು ಮಾತೇ ಇಲ್ಲ. ಕ್ರಿಕೆಟ್ ಮೇಲಿನ ಪ್ರೀತಿ, ಶಿಸ್ತು, ಬದ್ಧತೆ, ತಂಡವನ್ನು ಮುನ್ನಡೆಸುವ ರೀತಿ ಎಲ್ಲವೂ ಕೂಡ ಅನಿಲ್ ಕುಂಬ್ಳೆಯಿಂದ ನೋಡಿ ಕಲಿಯಬೇಕು ಎಂದ್ರು.
ಇದೇ ವೇಳೆ ಕೊರೋನಾ ವೈರಸ್‍ನಿಂದಾಗಿ ಈಗಾಗಲೇ ಐಪಿಎಲ್ ಟೂರ್ನಿ ನಡೆದಿಲ್ಲ. ಐಪಿಎಲ್ ಟೂರ್ನಿ ನಡೆಯಬೇಕು. ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯೂ ನಡೆಯಬೇಕು. ಮೈದಾನದಲ್ಲಿ ಪ್ರೇಕ್ಷಕರಿಲ್ಲದೆ ಆಟವಾಡಿದ್ರೂ ಪರವಾಗಿಲ್ಲ. ಕ್ರಿಕೆಟ್ ಆಟ ಸೇರಿದಂತೆ ಕ್ರೀಡಾ ಚಟುವಟಿಕೆಗಳು ನಿಧಾನವಾಗಿ ಆರಂಭವಾಗಬೇಕು ಎಂದ್ರು.

ಮತ್ತೊಂದೆಡೆ ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡಿದ ವಿಜಯ್ ಭಾರದ್ವಾಜ್, ವಿರಾಟ್ ಕೊಹ್ಲಿ ಪ್ರತಿಭಾನ್ವಿತ ಆಟಗಾರ. 19 ವಯೋಮಿತಿ ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಹಾಗೂ ಐಪಿಎಲ್ ನಲ್ಲಿ ಆರ್‍ಸಿಬಿ ಪರ ಆಡುತ್ತಿದ್ದ ಮೊದಲ ಎರಡು ವರ್ಷ ಕ್ರಿಕೆಟ್ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದರು. ಆದ್ರೆ ನಂತರ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ವಿಶ್ವ ಕ್ರಿಕೆಟ್ ನಲ್ಲಿ ದೈತ್ಯ ಆಟಗಾರನಾಗಿ ರೂಪುಗೊಂಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ವಿರಾಟ್ ಕೊಹ್ಲಿ ಮನುಷ್ಯನಾ…. ಅಬ್ಬಾ ಅದು ವಿರಾಟ ದರ್ಶನ ಎಂದು ಬಣ್ಣಿಸಿದ್ರು. ಇದೇ ವೇಳೆ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ ನಡುವೆ ಹೊಂದಾಣಿಕೆ ಮಾಡಲ್ಲ. ಮಾಡುವುದು ಕೂಡ ಸರಿಯಲ್ಲ. ಆದ್ರೆ ಅವರಿಬ್ಬರಲ್ಲಿ ಸಾಕಷ್ಟು ಸಾಮ್ಯತೆಗಳಿವೆ ಎಂದ್ರು. ಗೆಲುವು, ರನ್ ಗಳಿಸಬೇಕು, ಆಡಬೇಕು, ಸವಾಲಿಗೆ ಪ್ರತಿ ಸವಾಲು ಹೀಗೆ ಮೈದಾನದಲ್ಲಿ ರನ್ ಮಳೆಯನ್ನು ಹರಿಸ್ತಾರೆ ಎಂದ್ರು.

ಇನ್ನೊಂದೆಡೆ ಸೆಹ್ವಾಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದ ವಿಜಿ, ಸೆಹ್ವಾಗ್ ಬ್ಯಾಟಿಂಗ್ ನಲ್ಲಿ ತಾಂತ್ರಿಕತೆ ಇಲ್ಲ ಎಂಬುದನ್ನು ಒಪ್ಪಲ್ಲ. ಸೆಹ್ವಾಗ್ ಅವರಲ್ಲಿ ಧೈರ್ಯವಿದೆ. ಟೈಮಿಂಗ್ ಇದೆ. ಚೆಂಡಿನ ಗತಿಯನ್ನು ತಕ್ಷಣವೇ ಅರಿತುಕೊಳ್ಳುತ್ತಾರೆ. ಹಾಗೇ ಯಾರ ಮಾತನ್ನು ಕೇಳುವುದಿಲ್ಲ. ತನ್ನ ಸಾಮಥ್ರ್ಯದ ಮೇಲೆ ಅವರು ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಅದೂ ಅಲ್ಲದೆ ಮಾನಸಿಕವಾಗಿ ಬಹಳ ಗಟ್ಟಿಗ. ಒಂದು ವೇಳೆ ಸೆಹ್ವಾಗ್ ಮನಸ್ಥಿತಿ ನನ್ನಲ್ಲಿ ಇರುತ್ತಿದ್ರೆ ಟೆಸ್ಟ್ ಕ್ರಿಕೆಟ್ ನಲ್ಲಿ ನಾನು 10ಸಾವಿರ ರನ್ ದಾಖಲಿಸುತ್ತಿದೆ ಎಂದ್ರು.

ಒಟ್ಟಿನಲ್ಲಿ ವಿಜಯ್ ಭಾರದ್ವಾಜ್ ತನ್ನ ಕ್ರಿಕೆಟ್ ಬದುಕಿನ ಹಲವಾರು ವಿಚಾರಗಳನ್ನು ಇದೇ ನೆನಪಿಸಿಕೊಂಡ್ರು. ಥ್ಯಾಂಕ್ಯೂ ವಿಜಯ್ ಭಾರದ್ವಾಜ್.

Tags: Vijay Bharadwaj
ShareTweetSendShare
Join us on:

Related Posts

ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ

ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ

by Shwetha
October 18, 2026
0

ರಾಜ್ಯ ರಾಜಕಾರಣದ ವಾಕ್ಸಮರ ಈಗ ಅತಿರೇಕಕ್ಕೆ ತಲುಪಿದ್ದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಅಬ್ಬರಕ್ಕೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಕಲ್ಬುರ್ಗಿಯಲ್ಲಿ ಅತ್ಯಂತ ಕಟು...

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

ಮಹಾರಾಷ್ಟ್ರದಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳ ಅಕ್ರಮ ಮಾರಾಟ ಜಾಲ ಪತ್ತೆ: ₹48 ಲಕ್ಷದ ಸರಕು ಜಪ್ತಿ, ರಿಲಯನ್ಸ್‌ ನಿರ್ದೇಶಕ ಸೇರಿ 10 ಜನರ ವಿರುದ್ಧ FIR

by Shwetha
October 18, 2026
0

ಅವಧಿ ಮುಗಿದ, ಹಾನಿಗೊಳಗಾದ ಹಾಗೂ ಗ್ರಾಹಕರಿಂದ ತಿರಸ್ಕರಿಸಲ್ಪಟ್ಟ ಆಹಾರ ಉತ್ಪನ್ನಗಳನ್ನು ನಾಶಪಡಿಸುವ ಬದಲು ಮತ್ತೆ ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಆಹಾರ...

ಪ್ರಧಾನಿಯ ತಂಬೂರಿ ಸದ್ದಿಗೆ ಕಾಂಗ್ರೆಸ್ ಕಿಡಿ: ಸನಾತನ ಸಂಸ್ಕೃತಿಯ ವಿರೋಧಿ ಕಾಂಗ್ರೆಸ್ ಎಂದ ಕೇಸರಿ ಪಡೆ

ಮೋದಿಯಾಟ ಕೊನೆಗಾಣಿಸಲು ಸಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್ ಫಂಡಿಂಗ್: ಪ್ರಜಾಪ್ರಭುತ್ವ ಉಳಿಸಲು ಹಣ ಕೊಟ್ಟರೆ ತಪ್ಪೇ?- ಬಿ ಕೆ ಹರಿಪ್ರಸಾದ್

by Shwetha
October 18, 2026
0

ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಡೆಯುತ್ತಿರುವ ಪ್ರತಿಯೊಂದು ಹೋರಾಟಕ್ಕೂ ಕಾಂಗ್ರೆಸ್ ಪಕ್ಷದ ಬೆಂಬಲವಿದೆ. ಕಾಕ್ರೋಚ್ ಜನತಾ ಪಾರ್ಟಿ ಅಂದರೆ...

ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ: ರೈತರೊಂದಿಗೆ ಸಭೆ ನಡೆಸಲು ಬೆಳಗಾವಿಗೆ ಸಿಎಂ ಡಿ.ಕೆ. ಶಿವಕುಮಾರ್

ಕಬ್ಬು ಬೆಲೆ ನಿಗದಿಗೆ ಆಗ್ರಹಿಸಿ ರೈತರ ಪ್ರತಿಭಟನೆ: ರೈತರೊಂದಿಗೆ ಸಭೆ ನಡೆಸಲು ಬೆಳಗಾವಿಗೆ ಸಿಎಂ ಡಿ.ಕೆ. ಶಿವಕುಮಾರ್

by Shwetha
October 18, 2026
0

ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿ, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ...

ಬಾಂಬೆ ಬಾಯ್ಸ್ ಪುಸ್ತಕ ಹೊರಬಂದರೆ ನಾಯಕರು ಬೆತ್ತಲಾಗುತ್ತಾರೆ,ಸಿದ್ದರಾಮಯ್ಯ ಮುಗಿಸಿದರೆ ನಮ್ಮ ಹಾದಿ ಸುಲಭ ಎಂಬ ಲೆಕ್ಕಾಚಾರ: ಸ್ಟಿಂಗ್ ಆಪರೇಷನ್ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ಎಚ್ ವಿಶ್ವನಾಥ್

ಬಾಂಬೆ ಬಾಯ್ಸ್ ಪುಸ್ತಕ ಹೊರಬಂದರೆ ನಾಯಕರು ಬೆತ್ತಲಾಗುತ್ತಾರೆ,ಸಿದ್ದರಾಮಯ್ಯ ಮುಗಿಸಿದರೆ ನಮ್ಮ ಹಾದಿ ಸುಲಭ ಎಂಬ ಲೆಕ್ಕಾಚಾರ: ಸ್ಟಿಂಗ್ ಆಪರೇಷನ್ ಹಿಂದಿನ ಕರಾಳ ಸತ್ಯ ಬಿಚ್ಚಿಟ್ಟ ಎಚ್ ವಿಶ್ವನಾಥ್

by Shwetha
October 18, 2026
0

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಮತ್ತು ಚಾರಿತ್ರ್ಯಹನನದ ಸಂಸ್ಕೃತಿಯ ಬಗ್ಗೆ ಹಿರಿಯ ರಾಜಕಾರಣಿ ಎಚ್ ವಿಶ್ವನಾಥ್ ಈ ರೀತಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram