ಸಚಿವ ಸಂಪುಟ ವಿಸರ್ಜಿಸಿದ ಆಂಧ್ರ ಸಿ ಎಂ, ಜಗನ್ ಮೋಹನ್ ರೆಡ್ಡಿ…
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಹೊಸ ಸಚಿವರನ್ನ ಕ್ಯಾಬಿನೇಟ್ ಗೆ ಕರೆತರಲು ತಮ್ಮ ಸಚಿವ ಸಂಪುಟವನ್ನು ವಿಸರ್ಜಿಸಿದ್ದಾರೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. 24 ಸಚಿವರು ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ್ದಾರೆ. 2022 ರ ಏಪ್ರಿಲ್ 11 ರಂದು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸದಾಗಿ ರಚನೆಯಾದ 26 ಜಿಲ್ಲೆಗಳಿಂದ ಹೊಸ ಕ್ಯಾಬಿನೆಟ್ ಸಚಿವರನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಅಂತಿಮ ಪಟ್ಟಿಯನ್ನು ನೀಡಲು ಜಗನ್ ಮೋಹನ್ ರೆಡ್ಡಿ ಇಂದು ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
Andhra Pradesh: CM Y. S. Jagan Mohan Reddy dissolves his Cabinet to bring in New Ministers








