ಜನರ ಪ್ರಾಣ ಹಿಂಡಲಾಗುತ್ತಿದೆ | #ಬೆಲೆ_ಏರಿಕೆ_ವಿರುದ್ಧ_ಜೆಡಿಎಸ್_ಸಮರ
ಬೆಂಗಳೂರು : ಅಗತ್ಯ ವಸ್ತು, ಗ್ಯಾಸ್, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯನ್ನು ವಿರೋಧಿಸಿ ಜೆಡಿಎಸ್ ಪಕ್ಷ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ #ಬೆಲೆ_ಏರಿಕೆ_ವಿರುದ್ಧ_ಜೆಡಿಎಸ್_ಸಮರ
ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಗಳ ಮೂಲಕ ಸರ್ಕಾರಗಳ ವಿರುದ್ಧ ಗರಂ ಆಗಿದ್ದಾರೆ.
ಕುಮಾರಸ್ವಾಮಿ ಅವರ ಟ್ವೀಟ್ ನಲ್ಲಿ..
ಕೇಂದ್ರ ಸರಕಾರ ನಿತ್ಯವೂ ಸೂರ್ಯೋದಯಕ್ಕೆ ಮುನ್ನ ತೈಲ ಬೆಲೆ ಬಿಸಿ ಮುಟ್ಟಿಸಿದರೆ, ರಾಜ್ಯ ಸರಕಾರವೂ ಕರೆಂಟ್ ಶಾಕ್ ಕೊಟ್ಟು ಜನರ ಮೇಲೆ ಬಾರುಕೋಲು ಬೀಸುತ್ತಿದೆ. ʼಪಂಚರಾಜ್ಯಗಳ ಫಲಿತಾಂಶ ಬಂದ ಮೇಲೆ ಜನರ ಪಂಚಪ್ರಾಣಗಳನ್ನೂ ಹಿಂಡಲಾಗುತ್ತಿದೆ.ʼ 2/3
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 8, 2022
ಕೇಂದ್ರ ಸರಕಾರ ನಿತ್ಯವೂ ಸೂರ್ಯೋದಯಕ್ಕೆ ಮುನ್ನ ತೈಲ ಬೆಲೆ ಬಿಸಿ ಮುಟ್ಟಿಸಿದರೆ, ರಾಜ್ಯ ಸರಕಾರವೂ ಕರೆಂಟ್ ಶಾಕ್ ಕೊಟ್ಟು ಜನರ ಮೇಲೆ ಬಾರುಕೋಲು ಬೀಸುತ್ತಿದೆ. ʼಪಂಚರಾಜ್ಯಗಳ ಫಲಿತಾಂಶ ಬಂದ ಮೇಲೆ ಜನರ ಪಂಚಪ್ರಾಣಗಳನ್ನೂ ಹಿಂಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಹಣದುಬ್ಬರ ಅಂಕೆ ಮೀರಿದೆ! ಬೆಲೆಗಳು ಷೇರು ಸೂಚ್ಯಂಕದಂತೆ ಜಿಗಿಯುತ್ತಿವೆ!! ಉದ್ಯಮಿಗಳ ಜೇಬು ವೇಗವಾಗಿ ತುಂಬುತ್ತಿದೆ!!?? ಬೆಲೆಗಳ ವಿರುದ್ಧ ನಮ್ಮ ಪಕ್ಷದ ಹೋರಾಟ ನಿಲ್ಲದು. ಕೇಂದ್ರ-ರಾಜ್ಯ ಸರಕಾರಗಳು ಬೆಲೆಗಳಿಗೆ ಕಡಿವಾಣ ಹಾಕಿ ಬಡವರೂ ಭಾರತದಲ್ಲಿ ಬದುಕಲು ಬಿಡಬೇಕು ಎಂದು ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
h d kumaraswamy tweet about price hike








