CSK vs SRH : ಚೆನ್ನೈ ಸೂಪರ್ ಕಿಂಗ್ಸ್ ಗೆ ಅಂಬಾಟಿ – ಅಲಿ ಆಸರೆ
ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿ ಸಂಕಷ್ಟದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಂಬಾಟಿ ರಾಯುಡು, ಮೊಯಿನ್ ಅಲಿ ಆಸರೆಯಾಗಿದ್ದಾರೆ.
ಪಂದ್ಯದಲ್ಲಿ ಹೈದರಾಬಾದ್ ತಂಡ ಟಾಸ್ ವಿನ್ ಆಯ್ತು. ಕೇನ್ ವಿಲಿಯಮ್ ಸನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಚೆನ್ನೈಗೆ ಹೈದರಾಬಾದ್ ಬೌಲರ್ ಗಳು ಶಾಕ್ ನೀಡಿದರು.
ರುತುರಾಜ್ ಗಾಯಕ್ವಾಡ್ ಈ ಪಂದ್ಯದಲ್ಲೂ ಬ್ಯಾಡ್ ಫಾರ್ಮ್ ಮುಂದುವರೆಸಿದರು. ಕೇವಲ 16 ರನ್ ಗಳಿಗೆ ಟಿ ನಟರಾಜನ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದ್ರು. ಇತ್ತ ಮತ್ತೊಬ್ಬ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ, 15 ರನ್ ಗಳಿಗೆ ಸುಸ್ತಾದರು.
ಇನ್ನು ಹೈದರಾಬಾದ್ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಶಶಾಂಕ್ ಸಿಂಗ್ ಮತ್ತು ಜಾನ್ ಸೆನ್ ತಂಡ ಸೇರಿಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಪ್ರಿಟೋರಿಯಸ್ ಬದಲು ತೀಕ್ಷಣ ತಂಡ ಸೇರಿಕೊಂಡಿದ್ದಾರೆ.
ತಂಡಗಳು:
ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ (ಸಿ), ಶಿವಂ ದುಬೆ, ಎಂಎಸ್ ಧೋನಿ (ಪ), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ
ಸನ್ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ಸಿ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ಪ), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್, ಟಿ ನಟರಾಜನ್
csk-vs-srh-match ipl 2022 match no 17









