1000 ಕೋಟಿ ಕ್ಲಬ್ ಸೇರಿದ RRR – ದಂಗಲ್, ‘ಬಾಹುಬಲಿ 2 ನಂತರ ಮೂರನೇ ಚಿತ್ರ
ರಾಜಮೌಳಿ ನಿರ್ದೇಶನದ ‘RRR’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರಿಯುತ್ತಾ ಮುನ್ನುಗ್ಗುತ್ತಿದೆ. 550 ಕೋಟಿ ಬಜೆಟ್ನಲ್ಲಿ ತಯಾರಾದ ಈ ಚಿತ್ರ 16 ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಅಮೀರ್ ಖಾನ್ ಅಭಿನಯದ ‘ದಂಗಲ್’ ಮತ್ತು ಪ್ರಭಾಸ್ ಅಭಿನಯದ ‘ಬಾಹುಬಲಿ 2’ ನಂತರ ‘RRR’ 1000 ಕೋಟಿ ಕ್ಲಬ್ಗೆ ಪ್ರವೇಶಿಸಿದ ಮೂರನೇ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಮೂರನೇ ವಾರದ ಎರಡನೇ ದಿನದಲ್ಲಿ ‘RRR’ 21 ಕೋಟಿ ಗಳಿಸಿದೆ
ಸಿನಿಮಾ ವ್ಯಾಪಾರ ವಿಶ್ಲೇಷಕರಾದ ಮನೋಬಾಲಾ ವಿಜಯಬಾಲನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ ರಾಮ್ ಚರಣ್ ತೇಜ, ಜೂನಿಯರ್ ಎನ್ಟಿಆರ್ ಅಭಿನಯದ ‘ಆರ್ಆರ್ಆರ್’ ಚಿತ್ರ ಮೂರನೇ ವಾರದ ಎರಡನೇ ದಿನ ಅಂದರೆ ಶನಿವಾರ ವಿಶ್ವದಾದ್ಯಂತ 21.68 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದಿದ್ದಾರೆ. ಮೊದಲನೇ ವಾರದಲ್ಲಿ ಈ ಚಿತ್ರ 709.36 ಕೋಟಿ ರೂಪಾಯಿ ವ್ಯವಹಾರ ಮಾಡಿತ್ತು. ಎರಡನೇ ವಾರದಲ್ಲಿ 259.88 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
#RRR WW Box Office
CROSSES the Himalayan ₹1000 cr milestone mark.
Week 1 – ₹ 709.36 cr
Week 2 – ₹ 259.88 cr
Week 3
Day 1 – ₹ 12.43 cr
Day 2 – ₹ 21.68 cr
Total – ₹ 1003.35 crHISTORICAL feat in Indian Cinema.
— Manobala Vijayabalan (@ManobalaV) April 10, 2022
RRR ಚಿತ್ರ ಬಿಡುಗಡೆಯಾಗಿ 16 ನೇ ದಿನದಲ್ಲಿ ಈ ಸಾಧನೆ ಮಾಡಿದೆ. ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ಒಟ್ಟು ಗಳಿಕೆ 1003.35 ಕೋಟಿ ರೂ. ‘ RRR’ ಸಿನಿಮಾ 1000 ಕೋಟಿ ಕ್ಲಬ್ಗೆ ಪ್ರವೇಶಿಸಿದ ರಾಮ್ ಚರಣ್ ಮತ್ತು ಜೂನಿಯರ್ NTR ಅವರ ಚೊಚ್ಚಲ ಚಿತ್ರವಾಗಿದೆ. ಇವರಿಬ್ಬರಿಗಿಂತ ಮೊದಲು ಅಮೀರ್ ಖಾನ್, ಪ್ರಭಾಸ್ 1000 ಕೋಟಿ ಕ್ಲಬ್ ಸೇರಿದ ನಟರಾಗಿದ್ದಾರೆ.