ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಗೆ 28 ಜನರಿಗೆ ಮಾತ್ರ ಅವಕಾಶ
ಬಾಲಿವುಡ್ ನಲ್ಲೀಗ ಸ್ಟಾರ್ ಜೋಡಿಯ ಮದುವೆಯದ್ದೇ ಸುದ್ದಿಯಾಗುತ್ತಿದೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಗೆ ಕೇವಲ 28 ಅತಿಥಿಗಳು ಮಾತ್ರ ಹಾಜರಿರುತ್ತಾರೆ ಎಂದು ಆಲಿಯಾ ಸಹೋದರ ರಾಹುಲ್ ಭಟ್ ಬಹಿರಂಗಪಡಿಸಿದ್ದಾರೆ.
ತಮ್ಮ ಸಹೋದರಿ ಮತ್ತು ರಣಬೀರ್ ಕಪೂರ್ ಅವರ ಮದುವೆಯಲ್ಲಿ ಎರಡು ಕುಟುಂಬದ ಅತ್ಯಾಪ್ತರನ್ನು ಸೇರಿ ಒಟ್ಟು ಕೇವಲ 28 ಅತಿಥಿಗಳು ಮಾತ್ರ ಮದುವೆಗೆ ಹಾಜರಾಗುತ್ತಾರೆ ಎಂದು ಹೇಳಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಈಗ ಬಾಲಿವುಡ್‌ನ ಟಾಕ್ ಅಪ್ ದ ಟೌನ್ ಆಗಿದ್ದು, ಊಟದ ಮೆನುವಿನಿಂದ ಮದುವೆಗೆ ಆಗಮಿಸುವ ಅತಿಥಿಗಳ ವರೆಗೆ ಮದುವೆ ಕುರಿತು ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಆಲಿಯಾ ಹಾಗೂ ರಣಬೀರ್ ಕಪೂರ್ ಕುಟುಂಬ ಒಡೆತನದ ಆರ್‌ಕೆ ಸ್ಟುಡಿಯೋ ಹೌಸ್ ನಲ್ಲಿ ಮದುವೆಯಾಗಲಿದ್ದಾರೆ.
ರಾಹುಲ್ ಭಟ್ ಮಹೇಶ್ ಭಟ್ ಮತ್ತು ಕಿರಣ್ ಭಟ್ ಅವರ ಮಗ, ಆದರೆ ಪೂಜಾ ಭಟ್ ಈತನಿಗೆ ಹಿರಿಯ ಸಹೋದರಿಯಾಗಬೇಕು. ಆಲಿಯಾ, ಮಹೇಶ್ ಭಟ್ ಅವರ ಎರಡನೇ ಪತ್ನಿ ಸೋನಿ ರಜ್ದಾನ್ ಅವರ ಮಗಳು. ಆದರೆ ಎರಡು ಕುಟುಂಬಗಳು ಅನೋನ್ಯವಾಗಿವೆ. ತಂಗಿಯ ಮದುವೆಯ ಬಗ್ಗೆ ರಾಹುಲ್ ತುಂಬಾ ಉತ್ಸುಕರಾಗಿದ್ದಾರೆ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಸೆಟ್ಟೇರಿ ಹಲವು ವರ್ಷಗಳೇ ಕಳೆದಿವೆ. ಈ ಸಿನಿಮಾದ ಸೆಟ್‌ನಲ್ಲಿ ಇಬ್ಬರ ಮಧ್ಯೆ ಪ್ರೀತಿ ಅರಳಿತ್ತು ಅಂತ ಹೇಳಲಾಗುತ್ತಿದೆ. ಅಷ್ಟೆ ಅಲ್ಲ ಆಲಿಯಾಗೆ ಚಿಕ್ಕ ವಯಸ್ಸಿನಲ್ಲೇ ರಣಬೀರ್ ಮೇಲೆ ಕ್ರಶ್ ಆಗಿತ್ತಂತೆ. ಈಗ ಪ್ರೇಮದಲ್ಲಿ ಬಿದ್ದಿರೋ ಈ ಜೋಡಿ ಮದುವೆ ಆಗಲು ಡಿಸೈಡ್ ಮಾಡಿದೆ.








