ಧಾರವಾಡ : ಬೇಲಿನೇ ಎದ್ದು ಹೊಲ ಮೇಯ್ದಂತೆ ಎಂಬ ಮಾತು ವಾಯವ್ಯ ಸಾರಿಗೆಯ ಕೆಲ ಅಧಿಕಾರಿಗೆ ಪಕ್ಕಾ ಮ್ಯಾಚ್ ಆಗುತ್ತೆ. ಹೌದು ಸಾರ್ವಜನಿಕ ಆಸ್ತಿಯನ್ನು ಕಾಪಾಡುವ ಜವಬ್ದಾರಿ ಸಾಮಾನ್ಯ ನಾಗರಿಕನಿಗೆ ಎಷ್ಟು ಇದ್ದಿಯೋ ಅಷ್ಟೇ ಜವಬ್ದಾರಿ ಸರ್ಕಾರಿ ನೌಕರರಿಗೆ ಇದೆ. ಆದರೆ ಇದನ್ನು ಮರೆತ ಕೆಲ ದುಷ್ಟರು ವಾಯವ್ಯ ಸಾರಿಗೆ ಸಂಸ್ಥೆಯ ಕಾರ್ಯಾಗಾರದಲ್ಲಿನ ಹಾಳಾದ ವಸ್ತುಗಳನ್ನು ಆಕ್ರಮವಾಗಿ ಮಾರಾಟ ಮಾಡಿದ್ದರು. 2015 ರಲ್ಲಿ ಕಾರ್ಯಾಗಾರದಲ್ಲಿ ಹಾಳಾದ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಕೇಳಿ ಬಂದಿತ್ತು. 2.80 ಕೋಟಿ ರೂಪಾಯಿ ಗಳ ಅಕ್ರಮ ಆರೋಪ ಕೇಳಿ ಬಂದಿತ್ತು .ಆಗ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಅಲ್ಲದೆ ಇಂದು ಇನ್ನೂ ಆರು ಜನ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತು ಆಗಿದೆ. ಆದ್ದರೆ ಆರು ಜನರನ್ನು ಸೇವಯಿಂದ ವಜಾ ಮಾಡಲಾಗಿದೆ. ವಾಯವ್ಯ ಸಾರಿಗೆ ಸಂಸ್ಥೆಯ ಎಂಡಿ ರಾಜೇಂದ್ರ ಚೋಳನ್ ಪ್ರಕರಣದಲ್ಲಿ ಭಾಗಿಯಾಗಿದ್ದವರನ್ನು ವಜಾ ಮಾಡಿ ಆದೇಶ ಹೊರಡಿಸಿದ್ದಾರೆ
ಚುನಾವಣೆಗಳು ತುಂಬಾ ದುಬಾರಿಯಾಗಿವೆ-ನನಗೀಗ 80 ವರ್ಷ ಎಷ್ಟು ದಿನ ಬದುಕಿರ್ತೀನೋ ಗೊತ್ತಿಲ್ಲ:ಇನ್ನು ಸಾಕು ಎಲೆಕ್ಷನ್ ರಾಜಕೀಯ ಎಂದ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಭವಿಷ್ಯದ ಕುರಿತು ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘೋಷಣೆಯೊಂದನ್ನು ಮಾಡಿದ್ದಾರೆ. ಇನ್ಮುಂದೆ ತಾವು ಯಾವುದೇ ವಿಧಾನಸಭಾ...








