KGF ಚಾಪ್ಟರ್ 2 ಸಿನಿಮಾಗೆ ನೆಗೆಟಿವ್ ರಿವ್ಯೂ
ಹಿಮಾಲಯದಷ್ಟು ನಿರೀಕ್ಷೆಗಳನ್ನು ತಣಿಸುತ್ತಾ ಕೆಜಿಎಫ್ ಚಾಫ್ಟರ್ 2 ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ.
ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಸ್ಕ್ರೀನ್ ಪ್ರಜೆನ್ಸ್, ಮದರ್ ಸೆಂಟಿಮೆಂಟ್ ಸಿನಿಮಾದ ಹೈಲೆಟ್ ಆಗಿದೆ.
ಒಟ್ಟಾರೆಯಾಗಿ ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಆದ್ರೆ ಬಾಲಿವುಡ್ ಮೀಡಿಯಾ ಮಾತ್ರ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ನೆಗೆಟಿವ್ ರಿವ್ಯೂ ಕೊಡುತ್ತಿದೆ.
ಕನ್ನಡದ ಪೊಗರು ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ದೇಶದಾದ್ಯಂತ ರೆಡ್ ಕಾರ್ಪೆಟ್ ಹಾಕಿ ಸಿನಿಮಾ ಪ್ರಿಯರು ಸ್ವಾಗತ ಕೋರಿದ್ದಾರೆ.
ಮೊದಲ ಪ್ರದರ್ಶನದಿಂದಲೇ ಸಿನಿಮಾಗೆ ಯುನಾನಿಮಸ್ ಆಗಿ ಬ್ಲಾಕ್ ಬಸ್ಟರ್ ಟಾಕ್ ಬಂದಿದೆ.
ತಮಿಳುನಾಡಿನಲ್ಲಿ ಬೀಸ್ಟ್ ಸಿನಿಮಾ ರಿಲೀಸ್ ಆದ ಥಿಯೇಟರ್ ಗಳ ಮುಂದೆ ಆಡಿಯನ್ಸ್ ಕಡಿಮೆಯಾಗಿದ್ದು, ರಾಕಿಭಾಯ್ ಆಕ್ಷನ್ ನೋಡಲು ಮುಗಿಬಿದ್ದಿದ್ದಾರೆ.
ಇತ್ತ ತೆಲುಗು ಆಡಿಯನ್ಸ್ ಕೂಡ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಬ್ರಹ್ಮರಥ ಹಿಡಿದಿದ್ದಾರೆ. ಹೀಗೆ ಸೌತ್ ನಲ್ಲಿ ಕೆಜಿಎಫ್ ಸಿನಿಮಾ ಯಾವುದೇ ಅಡ್ಡಿ ಆತಂಕವಿಲ್ಲದೇ ಅಬ್ಬರಿಸುತ್ತಿದೆ.
ಆದ್ರೆ ಕೆಜಿಎಫ್ ಚಾಪ್ಟರ್ 2 ಸಿನಿಮಾ ರಿಲೀಸ್ ಗೂ ಮುನ್ನಾ ತುಟಿಬಿಚ್ಚಿದ ಹಿಂದಿ ಮಿಡಿಯಾ, ಇದೀಗ ಕೆಜಿಎಫ್ ಚಾಫ್ಟರ್ 2 ಸಿನಿಮಾಗೆ ನೆಗೆಟಿವ್ ರಿವ್ಯೂ ಕೊಡುತ್ತಿದೆ.
ಮುಖ್ಯವಾಗಿ ಸಿನಿಮಾದ ಮೈನಸ್ ಪಾಯಿಂಟ್ ಗಳನ್ನೇ ಹೆಚ್ಚಾಗಿ ತೋರಿಸುತ್ತಿದೆ. ಹಿಂದಿ ಮಿಡಿಯಾದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಗ್ಗೆ ಹೊಗಳಿ ಒಂದೆಡೆರು ವೆಬ್ ಸೈಟ್ ಗಳು ಮಾತ್ರ ಬರೆದಿವೆ.
ಒಂದಿಬ್ಬರು ವಿಮರ್ಷಕರು ಮಾತ್ರ ಪಾಸಿಟಿವ್ ಆಗಿ ಬರೆದಿದ್ದಾರೆ. ಆದ್ರೆ ಇನ್ನುಳಿದ ಬಾಲಿವುಡ್ ಪ್ರಿಯರು ಹೊಟ್ಟೆ ಕಿಚ್ಚನ್ನ ತಮ್ಮ ಬರವಣಿಗೆಯಲ್ಲಿ ತೋರಿಸಿದ್ದಾರೆ.
ಇದಲ್ಲದೇ ಮೊನ್ನೆ ಮೊನ್ನೆ ರಿಲೀಸ್ ಆದ ಆರ್ ಆರ್ ಆರ್ , ಪುಷ್ಪಾ ಸಿನಿಮಾ ವಿಷಯಗಳಲ್ಲಿಯೂ ಹಿಂದಿ ಮಿಡಿಯಾ ರೀತಿ ಮಾಡಿತ್ತು. bollywood-media-sites-pour-negative-reviews-kgf-2









