ಬೆಂಗಳೂರು, ಮೇ 27 : ಅಖಿಲ ಭಾರತ ಶಾಪಿಂಗ್ ಮಾಲ್’ಗಳ ಸಂಘ ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಪದಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾಲ್, ಹೋಟೆಲ್ ಸೇರಿದಂತೆ ಪ್ರವಾಸಿ ವಲಯಗಳು ಪುನರಾರಂಭಿಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಅಧ್ಯಕ್ಷ ಕೆ.ಶಾಮರಾಜು ಅವರು ಮಾತಾನಾಡಿ ನಮ್ಮ ಮನವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೇಂದ್ರ ಸರ್ಕಾರದೊಂದಿಗೆ ಮಾರ್ಗಸೂಚಿ ಪ್ರಕಾರ ಪತ್ರ ವ್ಯವಹಾರ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಹೋಟೆಲ್ ಗಳು ತೆರೆಯಲು ಅವಕಾಶ ನೀಡಿದ್ದರೂ, ಅಲ್ಲಿಯೇ ಆಹಾರ ಸೇವಿಸಲು ಅನುಮತಿ ನೀಡಿಲ್ಲ. ಪಾರ್ಸೆಲ್ ಸೇವೆಗೆ ಮಾತ್ರ ಅನುಮತಿ ನೀಡಲಾಗಿದೆ. ಆದುದರಿಂದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಹೋಟೆಲ್ ನಲ್ಲಿಯೇ ಆಹಾರ ಸೇವಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.








