ಜಾಂಟಿ ರೋಡ್ರ್ಸ್… ಗೊತ್ತಿರಲೇಬೇಕು.. ದಕ್ಷಿಣ ಅಫ್ರಿಕಾದ ಮಾಜಿ ಆಲ್ ರೌಂಡರ್. ಅಷ್ಟು ಮಾತ್ರವಲ್ಲ.. ಒಂದು ಕಾಲದಲ್ಲಿ ಮೈದಾನದಲ್ಲಿ ಹಾರಾಡುತ್ತಿದ್ದ ಹಕ್ಕಿ… ಚಿರತೆಯ ವೇಗದಂತೆ ಓಡುತ್ತಿದ್ದ ಜಾಂಟಿ ರೋಡ್ಸ್ ವಿಶ್ವ ಕ್ರಿಕೆಟ್ ನ ಅದ್ಭುತ ಫೀಲ್ಡರ್.. ಅಷ್ಟೇ ಅಲ್ಲ, ಎಂದೆಂದು ನೆನಪಿಕೊಳ್ಳುವಂತಹ ಆಟಗಾರ.
ಗಾಳಿಯಲ್ಲಿ ಹಾರಾಡಿಕೊಂಡು ಚೆಂಡನ್ನು ಹಿಡಿಯುತ್ತಿದ್ದ ರೀತಿ…. ಮಿಂಚಿನ ವೇಗದಲ್ಲಿ ಓಡುತ್ತಿದ್ದ ಪರ.. ಅಬ್ಬಾ.. ಜಾಂಟಿಯತ್ತ ಚೆಂಡು ಹೋದ್ರೆ ಎದುರಾಳಿ ಬ್ಯಾಟ್ಸ್ ಮನ್‍ಗಳು ರನ್ ಕದಿಯುವುದಕ್ಕೂ ಹಿಂದೆ ಮುಂದೆ ಯೋಚನೆ ಮಾಡುತ್ತಿದ್ದರು. ಅಂತಹ ಮಾಂತ್ರಿಕ ಶಕ್ತಿ ಜಾಂಟಿ ರೋಡ್ಸ್ ನಲ್ಲಿತ್ತು. ಜೊತೆಗೆ ಯಾರ ಊಹೆಗೂ ನಿಲುಕದಂತಹ ಅದೆಷ್ಟೋ ಕ್ಯಾಚ್‍ಗಳನ್ನು ಜಾಂಟಿ ರೋಡ್ಸ್ ಹಿಡಿದಿದ್ದಾರೆ.
ಇದೀಗ ಸುರೇಶ್ ರೈನಾ ಜೊತೆಗಿನ ಲೈವ್ ಕಾರ್ಯಕ್ರಮದಲ್ಲಿ ಜಾಂಟಿರೋಡ್ಸ್ ಅಚ್ಚರಿಯ ಅಭಿಪ್ರಾಯವೊಂದನ್ನು ವ್ಯಕ್ತಪಡಿಸಿದ್ದಾರೆ. ಅದು ಕೂಡ ತನ್ನ ಜೊತೆ ಮಾತನಾಡುವಾಗ ಮಾತನಾಡುತ್ತಿದ್ದ ವ್ಯಕ್ತಿಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದಾಗ ಹೇಗೆ ಆಗಬೇಕು ಅಲ್ವಾ. ಅದೇ ಥರಾ ಸುರೇಶ್ ರೈನಾಗೂ ಆಗಿದೆ. ಜಾಂಟಿ ರೋಡ್ಸ್ ಹೇಳಿರುವ ಮಾತಿನಿಂದ ಸುರೇಶ್ ರೈನಾಗೆ ಒಂದು ಕ್ಷಣ ಏನು ಹೇಳಬೇಕು ಅಂತನೇ ಗೊತ್ತಾಗಿಲ್ಲ. ಯಾಕಂದ್ರೆ ಜಾಂಟಿರೋಡ್ಸ್ ಹೊಗಳಿದ್ದು ಸುರೇಶ್ ರೈನಾ ಅವರನ್ನೇ.
ಹೌದು, ಸುರೇಶ್ ರೈನಾ ಜೊತೆ ಮಾತನಾಡುತ್ತಿದ್ದ ಜಾಂಟಿ ರೋಡ್ಸ್, ನಾನು ನಿನ್ನ ಅಪ್ಪಟ ಅಭಿಮಾನಿ. ಯಾಕಂದ್ರೆ ನಿನ್ನ ಫೀಲ್ಡಿಂಗ್ ಮಾಡುವ ಶೈಲಿಯಲ್ಲಿ ನಾನು ನನ್ನನ್ನು ಕಂಡುಕೊಳ್ಳುತ್ತಿದ್ದೇನೆ, ನನ್ನ ಯವ್ವನದ ದಿನಗಳಲ್ಲಿ ನಿನ್ನಂತೆ ನಾನು ಫೀಲ್ಡಿಂಗ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
ಸುರೇಶ್ ರೈನಾ ಕೂಡ ಟೀಮ್ ಇಂಡಿಯಾದ ಅದ್ಭುತ ಫೀಲ್ಡರ್. ಅನೇಕ ಪಂದ್ಯಗಳಲ್ಲಿ ಅದ್ಭುತವಾದ ಕ್ಯಾಚ್‍ಗಳನ್ನು ಹಿಡಿದಿದ್ದಾರೆ. ಯಾರೂ ಊಹಿಸದ ರೀತಿಯ ರನೌಟ್‍ಗಳನ್ನು ಮಾಡಿದ್ದಾರೆ. ಗಾಳಿಯಲ್ಲಿ ತೇಲಿಕೊಂಡು, ಡೈವ್ ಹೊಡೆಯುವ ರೀತಿ, ವೇಗವಾಗಿ ಚೆಂಡನ್ನು ತಡೆಯುತ್ತಿದ್ದ ರೀತಿಯಿಂದ ಜಾಂಟಿರೋಡ್ಸ್ ನಂತೆ ಸುರೇಶ್ ರೈನಾ ಕೂಡ ಎದುರಾಳಿ ಬ್ಯಾಟ್ಸ್ ಮೆನ್‍ಗಳಿಗೆ ಭಯ ಹುಟ್ಟಿಸುತ್ತಿದ್ದರು.
ಇನ್ನು, ಸುರೇಶ್ ರೈನಾ ಜೊತೆ ಜಾಂಟಿ ರೋಡ್ಸ್ ರವೀಂದ್ರ ಜಡೇಜಾ ಬಗ್ಗೆನೂ ಮಾತನಾಡಿದ್ದಾರೆ. ಜಡೇಜಾ ಕೂಡ ಅತ್ಯುತ್ತಮ ಫೀಲ್ಡರ್. ಆದ್ರೆ ಆತ ನಿನ್ನ ಥರಾ ಅಲ್ಲ. ಸ್ವಲ್ಪ ಮಟ್ಟಿಗೆ ಮೈಕೆಲ್ ಬೆವನ್ ಅವರನ್ನು ನೆನಪಿಸುತ್ತಾನೆ, ಎಲ್ಲರೂ ಚೆಂಡನ್ನು ಕೈಯಿಂದ ಮೇಲಕ್ಕೆ ಎಸೆಯುತ್ತಾರೆ. ಆದ್ರೆ ಜಡೇಜಾ ಸೈಡ್ ಆರ್ಮ್‍ನಿಂದ ಎಸೆಯುತ್ತಾರೆ ಎಂದ್ರು. ಮೈಕೆಲ್ ಬೆವನ್ ಕೂಡ ಅದ್ಭುತ ಫೀಲ್ಡರ್. ಆದ್ರೆ ಜಾಸ್ತಿ ಡೈವ್ ಹೊಡೆಯಲ್ಲ. ಆದ್ರೆ ಆತನಲ್ಲಿ ಮಿಂಚಿನ ವೇಗವಿದೆ. ಹೀಗಾಗಿ ಮೈದಾನದಲ್ಲಿ ಎದ್ದುಬಿದ್ದು ಕ್ಷೇತ್ರ ರಕ್ಷಣೆ ಮಾಡುವುದಿಲ್ಲ. ಆದ್ರೆ ನಾನು ನೀನು ಹಾಗಲ್ಲ. ನಾವು ಮೈದಾನದಲ್ಲಿ ಎದ್ದುಬಿದ್ದು ಬೀಳುತ್ತೇವೆ. ನಾವು ಡರ್ಟಿ ಫೀಲ್ಡರ್ಸ್. ನಮ್ಮ ಬಟ್ಟೆಗಳು ಬೇಗನೇ ಕೊಳಕಾಗುತ್ತವೆ. ನಾವು ಮೈದಾನದಲ್ಲಿ ಬಿದ್ರೂ ಅಷ್ಟೇ ವೇಗವಾಗಿ ಎದ್ದೇಳುತ್ತೇವೆ ಎಂದು ಜಾಂಟಿರೋಡ್ಸ್ ಸುರೇಶ್ ರೈನಾ ಬಳಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ್ರು.








