IPL 2022 | ಸಿಎಸ್ ಕೆಗೆ ಮತ್ತೊಂದು ಆಘಾತ.. ಸ್ಟಾರ್ ಬೌಲರ್ ಔಟ್..
ಯಾಕೋ..! ಐಪಿಎಲ್ 2022ರ ಸೀಸನ್ ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಗೆ ಸರಿ ಬಂದಿಲ್ಲ ಅಂತಾ ಕಾಣುತ್ತಿಲ್ಲ.
ಯಾಕಂದರೆ 15ನೇ ಆವೃತ್ತಿಯ ಟೂರ್ನಿ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇದೆ.
ಸದ್ಯ ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಟೂರ್ನಿಯ ಆರಂಭದಲ್ಲಿ 14 ಕೋಟಿ ಒಡೆಯ ಆಲ್ ರೌಂಡರ್ ದೀಪಕ್ ಚಹಾರ್ ತಂಡದಿಂದ ದೂರವಾದ್ರೆ, ಇದೀಗ ಮೊಣಕಾಲಿನ ಗಾಯದ ಕಾರಣದಿಂದಾಗಿ ಮಿಲ್ನೆ ಟೂರ್ನಿಗೆ ಗುಡ್ ಬೈ ಹೇಳಿದ್ದಾರೆ.
ಈ ಋತುವಿನಲ್ಲಿ ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿದಿದ್ದ ಮಿಲ್ನೆ ಎರಡನೇ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ಗಾಯಗೊಂಡಿದ್ದರು.
ಗಾಯದ ತೀವ್ರತೆ ಹೆಚ್ಚಾಗಿದ್ದು ಸ್ಕ್ಯಾನ್ ಮಾಡಿದ್ದರಿಂದ ವೈದ್ಯರು ಮಿಲ್ನೆಗೆ ಎರಡು ವಾರಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಹೀಗಾಗಿ ಮಿಲ್ನೆ ಅವರು ಈ ಬಾರಿಯ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಮಿಲ್ನೆ ದೂರವಾಗಿದ್ದಾರೆ.
ಈ ವರ್ಷದ ಮೆಗಾ ಹರಾಜಿನಲ್ಲಿ ಮಿಲ್ನೆ ಅವರನ್ನು 1.9 ಕೋಟಿ ರೂ.ಗೆ ಸಿಎಸ್ ಕೆ ಖರೀದಿಸಿದೆ.
ಏತನ್ಮಧ್ಯೆ, CSK ತನ್ನ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಏಪ್ರಿಲ್ 21 ರಂದು ಎದುರಿಸಲಿದೆ.
ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. IPL 2022 Another shock for CSK Star bowler out









