ಬೆಂಗಳೂರಿನಲ್ಲಿ ರಾತ್ರಿಯೂ ಸಿಗಲಿದೆ ಊಟ ತಿಂಡಿ – 24/7 ಹೋಟೆಲ್ ಓಪನ್
ಕರೋನಾ ಮತ್ತು ಬೆಲೆ ಏರಿಕೆಯಿಂದ ನಷ್ಟ ಅನುಭವಿಸಿದ್ದ ಹೋಟೆಲ್ ಗಳು ಮತ್ತು ಜನತೆ ಇಬ್ಬರಿಗೂ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವ್ಯಾಪಾರಕ್ಕಾಗಿ ಹೆಚ್ಚಿನ ಸಮಯಕ್ಕ ಅವಕಾಶ ಮಾಡಿಕೊಡಲು ಇನ್ನು ಮುಂದೇ ಇಡೀ ದಿನ ರಾತ್ರಿ ಅಂದರೆ 24/7 ಹೋಟೆಲ್ ಗಳು ತೆರೆಯಲಿವೆ ಎಂದು. ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಹೊತ್ತು ಸಹ ಅಹಾರ ಸಿಗಲಿದೆ. ಈ ಕುರಿತು ರಾಜ್ಯ ಸರ್ಕಾರ ಹೊಸ ಆದೇಶವನ್ನ ಹೊರಡಿಸಿದೆ.
ಹೊಟೆಲ್ ಗಳು ಬೇಕರಿಗಳು ಸ್ವೀಟ್ ಸ್ಟಾಲ್ ಐಸ್ ಕ್ರೀಂ ಶಾಪ್ ಗಳು ದಿನದ 24 ಗಂಟೆ ತೆರೆಯಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ. ಸರ್ಕಾರದ ಉದ್ದೇಶವನ್ನ ಸ್ವಾಗತಿಸಿರುವ ಹೋಟೆಲ್ ಉದ್ಯಮಗಳ ಸಂಘವು ಇದೀಗ ಪೊಲೀಸ್ ಇಲಾಖೆಯ ಅನುಮತಿಗಾಗಿ ಕಾಯುತ್ತಿದೆ.
2021 ರಲ್ಲಿ ಹೋಟೆಲ್ ಗಳು 24 ಗಂಟೆ ತೆರೆಯಲು ಅನುಮತಿ ನೀಡಲಾಗಿತ್ತು ಆದರೆ ಕೋವಿಡ್ ಕಾರಣಗಳಿಂದಾಗಿ ಈ ಸೇವೆಯನ್ನ ತಡೆಯಿಡಿಯಲಾಗಿತ್ತು. ಈಗ ಕೋವಿಡ್ ಕಡಿಮೆಯಾದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಗೆ ಹೋಟೆಲ್ ಉದ್ಯಮಗಳು ಸೇವೆ ಆರಂಭ ಕೋರಿ ಪೊಲೀಸ್ ಇಲಾಖೆಗೆ ಮನವಿ ಪತ್ರವನ್ನ ಬರೆದಿವೆ. ಪೊಲೀಸ್ ಇಲಾಖೆ ಅನುಮತಿ ದೊರೆತ ಬಳಿಕ 24 ಗಂಟೆಯೂ ಊಟ ತಿಂಡಿ ಸಿಗಲಿದೆ ಎಂದು ಹೊಟೆಲ್ ಗಳ ಸಂಘ ತಿಳಿಸಿದೆ.








