
ಹೊಸದಿಲ್ಲಿ, ಮೇ 27 : ಕೊರೋನಾ ವೈರಸ್ ಸೋಂಕು ಹರಡಿರುವ ಪೂರ್ವ ಆಫ್ರಿಕಾದಲ್ಲಿ ಕುರಿ ಮತ್ತು ಪೋಪೋ ಹಣ್ಣಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಪೂರ್ವ ಆಫ್ರಿಕಾದ ಟಾಂಜಾನಿಯಾದಲ್ಲಿ ಕುರಿ ಮತ್ತು ಪೋಪೋ ಹಣ್ಣಿನ ಮಾದರಿಯನ್ನು ಪರೀಕ್ಷಿಸಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಆಫ್ರಿಕಾದ ಅಧ್ಯಕ್ಷ ಜಾನ್ ಮಾಗುಫುಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಚೀನಾದಿಂದ ತರಿಸಿದ ಕೊರೋನಾ ಪರೀಕ್ಷಾ ಕಿಟ್ ನಲ್ಲಿ ಕುರಿ ಮತ್ತು ಪೋಪೋ ಹಣ್ಣಿನ ಮಾದರಿಗಳನ್ನು ಪರೀಕ್ಷಿಸಲಾಯಿತು. ವರದಿ ಹೊರಬಂದಾಗ ಕುರಿ ಮತ್ತು ಪೋಪೋ ಹಣ್ಣಿನಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಚೀನಾದ ಪರೀಕ್ಷಾ ಕಿಟ್ ಕಳಪೆ ಮಟ್ಟದಾಗಿದ್ದು, ಇದರ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲಿಯವರೆಗೆ ಪೂರ್ವ ಆಫ್ರಿಕಾದ ಟಾಂಜಾನಿಯಾದಲ್ಲಿ 480 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 16 ಸಾವುಗಳು ಸಂಭವಿಸಿವೆ. ಕೊರೋನಾ ಸೋಂಕು ಪತ್ತೆ ಹಚ್ಚಲು ಪೂರ್ವ ಆಫ್ರಿಕಾ, ಚೀನಾದಿಂದ ಪರೀಕ್ಷಾ ಕಿಟ್ ತರಿಸಿಕೊಂಡಿತ್ತು. ಚೀನಾದಿಂದ ನಮಗೆ ಕೊರೊನಾ ವೈರಸ್ ಪರೀಕ್ಷಾ ಕಿಟ್ ದೊರಕಿದ್ದು, ಪರೀಕ್ಷಿಸಿದಾಗ ಅದರಲ್ಲಿ ಲೋಪ ದೋಷವಿರುವುದು ಕಂಡು ಬಂದಿದೆ. ಕುರಿ ಮತ್ತು ಪೋಪೋ ಹಣ್ಣಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದಾಗ ಅವು ಹಣ್ಣು ಮತ್ತು ಕುರಿಗಳ ಸ್ಯಾಂಪಲ್ ಗಳೆಂದು ಪ್ರಯೋಗಾಲಯಕ್ಕೆ ತಿಳಿಸಿರಲಿಲ್ಲ. ವರದಿ ಪಾಸಿಟಿವ್ ಎಂದು ಬಂದ ಮೇಲೆಯೇ ಇದು ಬಹಿರಂಗವಾಗಿರುವುದು ಎಂದು ಅಧ್ಯಕ್ಷ ಜಾನ್ ಮಾಗುಫುಲಿ ಹೇಳಿದ್ದಾರೆ.
ಅಧ್ಯಕ್ಷ ಮಾಗುಫುಲಿ ಮಾತನಾಡುತ್ತಾ, ಪೋಪೋ ಹಣ್ಣು ಮತ್ತು ಮೇಕೆ ಸಹ ಕೊರೊನಾ ಸೋಂಕಿಗೆ ಒಳಗಾಗಲು ಸಾಧ್ಯವೇ ? ಚೀನಾದ ಟೆಸ್ಟಿಂಗ್ ಕಿಟ್ ನ ಮೇಲೆ ತನಿಖೆ ನಡೆಸಿ, ಅದನ್ನು ಪರೀಕ್ಷಿಸಬೇಕು. ಕೆಲವೊಮ್ಮೆ ಟೆಸ್ಟ್ ನಡೆಸುವಾಗ ಮನುಷ್ಯರ ಹೊರತಾಗಿಯೂ ಬೇರೆ ಬೇರೆ ಸ್ಯಾಂಪಲ್ಗಳನ್ನು ಕ್ರೋಢಿಕರಿಸುತ್ತಾರೆ ಎಂದು ಹೇಳಿದ್ದಾರೆ.
ಮೆಡಾಗಾಸ್ಕರ್ ನಿಂದ ಕೊರೋನಾ ಸೋಂಕು ತಡೆಗಾಗಿ ಹರ್ಬಲ್ ಆರ್ಗಾನಿಕ್ಸ್ ಕೂಡ ತರಿಸಲು ಸೂಚಿಸಿದ್ದು, ಅದಕ್ಕಾಗಿ ಅವರು ವಿಶೇಷ ವಿಮಾನವನ್ನೂ ಕಳುಹಿಸುತ್ತಿದ್ದಾರೆ. ಮಾಲಾಗಾಸಿ ಇನ್ಸ್ಟಿಟ್ಯೂಟ್ ಫಾರ್ ಅಪ್ಲೈಡ್ ರಿಸರ್ಚ್ ಕೋವಿಡ್ ಆರ್ಗಾನಿಕ್ಸ್ ಅನ್ನು ಆರ್ತೋಮಿಸಿಯಾ ಗಿಡದಲ್ಲಿ ಅಭಿವೃದ್ಧಿಪಡಿಸಿದೆ. ಇದರ ಪ್ರಯೋಗಿಕ ಪರೀಕ್ಷೆ ಇನ್ನೂ ನಡೆದಿಲ್ಲವಾದರೂ ಮೆಡಾಗಾಸ್ಕರ್ ಅಧ್ಯಕ್ಷ ಆಂಡ್ರೆ ರಾಜೋಲಿನಾ ಈ ಔಷಧಿಯಿಂದ ಅನೇಕ ಕೊರೋನಾ ರೋಗಿಗಳು ಗುಣಮುಖರಾಗಿದ್ದಾರೆ ಮತ್ತು ಶಾಲೆಗೆ ಮರಳುತ್ತಿರುವ ಮಕ್ಕಳಿಗೆ ಕಡ್ಡಾಯವಾಗಿ ಔಷಧಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ ಎಂದು ಅಧ್ಯಕ್ಷ ಮಾಗುಫುಲಿ ತಿಳಿಸಿದ್ದಾರೆ. ತಂಜಾನಿಯಾದ ವಿರೋಧ ಪಕ್ಷ, ಹೊಸ ಕೊರೊನಾ ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯನ್ನು ಸರ್ಕಾರವು ಮರೆಮಾಚಿದೆ ಎಂದು ಆರೋಪಿಸಿದ್ದು, ಇತರೆ ದೇಶಗಳಂತೆ ಕೊರೊನಾ ತಡೆಗಟ್ಟಲು ಕಟ್ಟುನಿಟ್ಟಿನ ನಿರ್ಬಂಧ ಮತ್ತು ಲಾಕ್ಡೌನ್ಗಳನ್ನು ಇಲ್ಲಿ ಜಾರಿಗೆ ತಂದಿಲ್ಲ ಎಂದು ಹೇಳಿವೆ.








