ಉಗ್ರ ಸಂಘಟನೆ ಎಲ್ಇಟಿಯ ಪ್ರಮುಖನನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಜಮ್ಮು&ಕಾಶ್ಮೀರ : ಬೆಳಿಗ್ಗೆಯಿಂದ ಉಗ್ರರು ಮತ್ತು ಯೋಧರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಎಲ್ಇಟಿಯ ಪ್ರಮುಖ ಉಗ್ರ ಯೂಸುಫ್ ಕಂಟ್ರೂನನ್ನು ಯೋಧರು ಹೊಡೆದುರುಳಿಸಿದ್ದಾರೆ.
ಉಗ್ರರ ಅಡಗುತಾಣಗಳ ಶೋಧ ಕಾರ್ಯಾಚರಣೆ ಕೈಗೊಂಡಿದ್ದ ಭಾರತೀಯ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಇದಕ್ಕೆ ಪ್ರತ್ಯುತ್ತರ ನೀಡಿದ ಯೋಧರು ಉಗ್ರ ಯೂಸುಫ್ ಕಂಟ್ರೂನನ್ನು ಸಂಹರಿಸಿ, ಹಲವು ಉಗ್ರರನ್ನು ಸೇನೆ ವಶಕ್ಕೆ ಪಡೆದಿದ್ದಾರೆ.
Top LeT terrorist Commander Yousuf Kantroo killed in Baramulla encounter. He was involved in several killings of civilians & Security Forces personnel incl recent killing of an SPO & his brother, one soldier & a civilian in Budgam district: IGP Kashmir Vijay Kumar pic.twitter.com/FF0E5Jo0FQ
— ANI (@ANI) April 21, 2022
ಕಾರ್ಯಾಚರಣೆ ವೇಳೆ ನಾಲ್ವರು ಯೋಧರಿಗೆ ಗಾಯಗಳಾಗಿವೆ. ಗಾಯಾಳು ಸಿಬ್ಬಂದಿಯನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಮ್ಮು-ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದರು.








