ಬೆಂಗಳೂರು, ಮೇ 28 : ಜೂನ್ 1 ರಿಂದ ಹೊರರಾಜ್ಯಗಳಿಗೆ ರೈಲುಗಳು ಸಂಚಾರ ಆರಂಭಗೊಳ್ಳಲಿವೆ. ಲಾಕ್ ಡೌನ್ ನಂತರ ಜೂನ್ 1ರಿಂದ ಹೊರರಾಜ್ಯಗಳು ಸೇರಿದಂತೆ ರಾಜ್ಯದ ವಿವಿಧ ಮಾರ್ಗಗಳಲ್ಲಿ ಒಟ್ಟು 16 ವಿಶೇಷ ರೈಲುಗಳನ್ನು ಕಾರ್ಯಾಚರಣೆ ಆರಂಭಿಸಲಿದೆ. ಕರ್ನಾಟಕದಿಂದ ಮಹಾರಾಷ್ಟ್ರ, ದೆಹಲಿಗೆ ರೈಲು ಸಂಚಾರ ನಡೆಸಲಿದೆ ಎಂದು ನೈರುತ್ಯ ರೈಲ್ವೆ ವಿಭಾಗ ಮಾಹಿತಿ ನೀಡಿದೆ ಪ್ರಯಾಣದ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿರುತ್ತದೆ.
ರೈಲುಗಳ ಸಂಚಾರದ ಕುರಿತು ಮಾಹಿತಿ ಇಲ್ಲಿದೆ :
ಜೂನ್ 1ರಿಂದ ಬೆಂಗಳೂರು – ಹುಬ್ಬಳ್ಳಿ, ಯಶವಂತಪುರ – ಶಿವಮೊಗ್ಗ, ವಾಸ್ಕೋಡಗಾಮ / ಹುಬ್ಬಳ್ಳಿ – ಹಜರತ್ ನಿಜಾಮುದ್ದೀನ್, ಬೆಂಗಳೂರು – ದಾನಪುರ, ಮುಂಬೈ ಕಂಟೋನ್ಮೆಂಟ್ – ಬೆಂಗಳೂರು, ಮುಂಬೈ ಕಂಟೋನ್ಮೆಂಟ್ – ಗದಗ ನಡುವೆ ರೈಲುಗಳು ಕಾರ್ಯಚರಣೆ ನಡೆಸಲಿದೆ.
ಜೂನ್ 2 ರಿಂದ ಯಶವಂತಪುರ – ಹಜರತ್ ನಿಜಾಮುದ್ದೀನ್(ಮಂಗಳವಾರ ಮತ್ತು ಗುರುವಾರ), ಶಿವಮೊಗ್ಗ – ಯಶವಂತಪುರ, ಬೆಂಗಳೂರು – ಮುಂಬೈ ಕಂಟೋನ್ಮೆಂಟ್, ಹೌರಾ – ಯಶವಂತಪುರ, ಗದಗ – ಮುಂಬೈ ಕಂಟೋನ್ಮೆಂಟ್ ನಡುವೆ ಸಂಚರಿಸಲಿದೆ.
ಜೂನ್ 3ರಿಂದ ಹಜರತ್ ನಿಜಾಮುದ್ದೀನ್ – ವಾಸ್ಕೊಡಗಾಮ / ಹುಬ್ಬಳ್ಳಿ ಮತ್ತು ದಾನಪುರ – ಕೆಎಸ್‌ಆರ್ ಬೆಂಗಳೂರು ಮಧ್ಯೆ ರೈಲುಗಳು ಓಡಾಟ ನಡೆಸಲಿದೆ.
ಜೂನ್ 4 ರಿಂದ ಯಶವಂತಪುರ-ಹೌರಾ ವಿಶೇಷ ರೈಲು ವಾರದಲ್ಲಿ ಐದು ದಿನ ಸಂಚರಿಸಲಿದೆ.
ಜೂನ್ 5 ರಂದು ಹಜರತ್ ನಿಜಾಮುದ್ದೀನ್ – ಯಶವಂತಪುರ ಮಧ್ಯೆ ವಿಶೇಷ ರೈಲು ಬುಧವಾರ ಮತ್ತು ಶುಕ್ರವಾರ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.