IPL 2022 | ಹರ್ಭಜನ್ ಸಿಂಗ್ ಆಲ್ ಟೈಂ ಐಪಿಎಲ್ 11 ಹೇಗಿದೆ ಗೊತ್ತಾ..?
ಐಪಿಎಲ್ ನ 15 ವರ್ಷಗಳ ಇತಿಹಾಸದಲ್ಲಿ ಅನೇಕ ಮಾಜಿ ಆಟಗಾರರಂತೆ, ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ತಮ್ಮ ಸಾರ್ವಕಾಲಿಕ ಐಪಿಎಲ್ ಇಲೆವೆನ್ ಅನ್ನು ಘೋಷಿಸಿದ್ದಾರೆ. ಭಜ್ಜಿ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.
ಭಜ್ಜಿ ಪ್ರಕಟಿಸಿದ ತಂಡದಲ್ಲಿ ಯಾವುದೇ ಸಂಚಲನ ಆಯ್ಕೆಗಳಲಿಲ್ಲದಿದ್ದರೂ ಆಸೀಸ್ ಸ್ಟಾರ್ ಓಪನರ್ ಹಾಗೂ ಹಾಲಿ ಡೆಲ್ಲಿ ಆಟಗಾರ ಡೇವಿಡ್ ವಾರ್ನರ್ ಅವರನ್ನು ಕೈಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಭಜ್ಜಿ ತನ್ನ ಸಾರ್ವಕಾಲಿಕ IPL ತಂಡಕ್ಕೆ ಕ್ರಿಸ್ ಗೇಲ್ ಮತ್ತು ರೋಹಿತ್ ಶರ್ಮಾ ಅವರನ್ನು ಆರಂಭಿಕರಾಗಿ ಆಯ್ಕೆ ಮಾಡಿದ್ದಾರೆ. ಒನ್ ಡೌನ್ ನಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
ನಾಲ್ಕನೇ ಮತ್ತು ಐದನೇ ಸ್ಥಾನಕ್ಕಾಗಿ ಶೇನ್ ವ್ಯಾಟ್ಸನ್ ಅವರು ಎಬ್ಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದಾರೆ. ನಂತರ, ಆರನೇ ಸ್ಥಾನದಲ್ಲಿ ಧೋನಿ (ವಿಕೆಟ್ ಕೀಪರ್), ಆಲ್ ರೌಂಡರ್ ಕೋಟಾದಲ್ಲಿ ಕಿರಾನ್ ಪೊಲಾರ್ಡ್, ರವೀಂದ್ರ ಜಡೇಜಾ ಇದ್ದಾರೆ.
ಇನ್ನು ಸ್ಪಿನ್ನರ್ ಕೋಟಾದಲ್ಲಿ ವಿಂಡೀಸ್ ಬೌಲರ್ ಸುನೀನ್ ನರೈನ್ ಇದ್ದು, ಇದು ಚರ್ಚೆಗೆ ಗ್ರಾಸವಾಗಿದೆ.
ಕ್ಯಾಶ್ ರಿಚ್ ಲೀಗ್ ನಲ್ಲಿ ಅಮಿತ್ ಮಿಶ್ರಾ, ಚಾಹಲ್ ರಂತಹ ಯಶಸ್ವಿ ಸ್ಪಿನ್ನರ್ ಗಳಿದ್ದರೂ ಭಜ್ಜಿ ನರೇನ್ ಗೆ ಸ್ಥಾನ ನೀಡಿದ್ದಾರೆ.
ಸ್ವತಃ ಅವರೇ ಸ್ಪಿನ್ನರ್ ಆಗಿದ್ದರೂ, ಸ್ಪಿನ್ನರ್ ಕೋಟಾದಲ್ಲಿ ತಮ್ಮ ಹೆಸರನ್ನು ಆಯ್ಕೆ ಮಾಡಲಿಲ್ಲ. ಕೊನೆಯದಾಗಿ, ಸ್ಪೆಷಲಿಸ್ಟ್ ವೇಗಿಗಳ ವಿಭಾಗದಲ್ಲಿ ಲಸಿತ್ ಮಲಿಂಗ್, ಜಸ್ಪ್ರೀತ್ ಬೂಮ್ರಾ ಇದ್ದಾರೆ.
ಹರ್ಭಜನ್ ಸಿಂಗ್ IPL ಸಾರ್ವಕಾಲಿಕ ಪ್ಲೇಯಿಂಗ್ XI: ಕ್ರಿಸ್ ಗೇಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶೇನ್ ವ್ಯಾಟ್ಸನ್, ಎಬಿ ಡಿವಿಲಿಯರ್ಸ್, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಕೀರನ್ ಪೊಲಾರ್ಡ್, ಸುನಿಲ್ ನರೈನ್, ಲಸಿತ್ ಮಾಲಿಂಗ, ಜಸ್ಪ್ರೀತ್ ಬುಮ್ರಾ ipl-2022-harbhajan-singh-all-time-ipl-xi