ಕಲಬುರಗಿಯಲ್ಲಿ ನಡೆದ ವಕ್ಸ್ ಹಠಾವೋ (ವಕ್ಸ್ಗಳ ವಿರುದ್ಧ ಹೋರಾಟ) ಪ್ರತಿಭಟನೆಯ ವೇಳೆ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರು ಪ್ರಚಲಿತ ರಾಜಕೀಯ ವಿಷಯಗಳ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದು, ತಮ್ಮ ವಿವಾದಾತ್ಮಕ ಹೇಳಿಕೆಯ ಮೂಲಕ ಗಮನಸೆಳೆದಿದ್ದಾರೆ.
ಸಿದ್ದಲಿಂಗ ಸ್ವಾಮೀಜಿ ಅವರು, ಜಮೀರ್ ಅಹ್ಮದ್ ನಮ್ಮ ರಾಜ್ಯ ಸರ್ಕಾರದ ಸಚಿವನಲ್ಲ. ಪಾಕಿಸ್ತಾನ ಸರ್ಕಾರದ ಸಚಿವ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.
ಅವರು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಲ್ಲಿ ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರ ನಡೆದಿದೆ. ರೈತರ ಜಮೀನುಗಳನ್ನು ವಕ್ಸ್ ಮೂಲಕ ನುಂಗಲಾಗುತ್ತಿದೆ, ನಮ್ಮ ಪವಿತ್ರ ಮಠ-ಮಂದಿರಗಳ ಭವಿಷ್ಯವನ್ನು ಕಾಪಾಡಲು ನಾವು ಬೀದಿಗೆ ಇಳಿಯಬೇಕಾಗಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ದೇಶವನ್ನೇ ಪುಕ್ಕಟೆಯಾಗಿ ನೀಡುತ್ತೆ. ರಾಜ್ಯ ಸರ್ಕಾರ ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಈ ವಿಷಯಗಳಿಗೆ ತಕ್ಷಣವೇ ಪರಿಹಾರ ಕಂಡುಹಿಡಿಯಬೇಕು, ಇಲ್ಲವಾದರೆ ಸಂಘಟನೆಗಳು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ ಸ್ವಾಮೀಜಿ, ಸರ್ಕಾರ ಹಾಗೂ ರಾಜಕೀಯ ನಾಯಕರ ವಿರುದ್ಧ ಹೋರಾಟ ಮುಂದುವರಿಸಲು ಕರೆ ನೀಡಿದ್ದಾರೆ.
ಸ್ವಾಮೀಜಿಯವರ ಹೇಳಿಕೆ ಹೊಸ ರಾಜಕೀಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.








