ಬೆಂಗಳೂರು : ದೇಶದ ರಾಜಕೀಯ ವ್ಯವಸ್ಥೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಪಕ್ಷಾಂತರ ಕಾಯ್ದೆ ತಲೆ ನೋವು ಆಗಿದೆ. ಅತಂಹ ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದಿದೆ. ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಿರಿಯ ಶಾಸಕ, ಸಚಿವರು ಭಾಗಿಯಾಗಿದ್ದರು.
ಯಾಕೆ ಜಾರಿಯಾಯಿತು ಪಕ್ಷಾಂತ ಕಾಯ್ದೆ
1967 ರಲ್ಲಿ ಹರಿಯಾಣದ ಗಯಾಲಾಲ್ ಎಂಬ ಶಾಸಕ ಒಂದೇ ದಿನ ಮೂರು ಪಕ್ಷಗಳನ್ನು ಬದಲಾಯಿಸಿದ್ದರು. ಆದಾದ ಬಳಿಕ 1968 ರಲ್ಲಿ ಕಾಂಗ್ರೆಸ್ ಸದಸ್ಯ ಪಿ.ಎ ವೆಂಕಟಸುಬ್ಬಯ್ಯ ಎಂಬುವವರು ಪಕ್ಷಾಂತರ ಮಾಡುವುದಕ್ಕೆ ಕಡಿವಾಣ ಹಾಕುವಂತೆ ಲೋಕಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಿದ್ದರು. ಅದರ ಪರಿಣಾಮದಿಂದಾಗಿ ವೈ ಬಿ ಚೌವ್ಹಾಣ್ ಸಮಿತಿ ನೇಮಕವಾಯಿತು. ಈ ಸಮಿತಿ ಸಮಗ್ರವಾಗಿ ಅಧ್ಯಾಯನ ಮಾಡಿತ್ತು. ದುರುಂತ ಎಂದರೆ ವೈ. ಬು ಚೌವ್ಹಾಣ್ ನೀಡಿದ ವರದಿಯ ಬಗ್ಗೆ ಚರ್ಚೆ ನಡೆಯಲಿಲ್ಲ. 1978 ರಲ್ಲಿ ಮೂರಾರ್ಜಿ ದೇಸಾಯಿ ಸರ್ಕಾರ ಮತ್ತೊಮ್ಮೆ ಈ ಪಕ್ಷಾಂತರ ಕಾಯ್ದೆ ನಿಷೇದ ಕಾಯ್ದೆ ಜಾರಿ ಮಾಡಲು ಮುಂದಾಗಿತ್ತು. ಆಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ವಿರೋಧಿಸಿದ್ದರು. ಆ ಕಾರಣಕ್ಕೆ ಮತ್ತೊಮ್ಮೆ ಸ್ಟಾಪ್ ಆಗಿತ್ತು. ಇದಾದ ಬಳಿಕ ರಾಜೀವ ಗಾಂಧಿ ಆಡಳಿತದಲ್ಲಿ ಪಕ್ಷಾಂತರಿಗಳಿಗೆ ಉಗಾಮ್ ಹಾಕಲೇ ಬೇಕು ಎಂದು ಪಕ್ಷಾಂತರ ನಿಷೇಧ ಜಾರಿ ಮಾಡಲಾಯಿತು. ಅದರ ಪರಿಣಾಮದಿಂದಾಗಿ 1985 ಜನವರಿ 30 ರಂದು ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಮಾಡಲಾಯಿತು. ಅಲ್ಲದೆ ಸಂವಿಧಾನದ 52 ನೇ ತಿದ್ದುಪಡಿಯಲ್ಲಿ 10 ನೇ ಶೆಡ್ಯೂಲ್ ನಲ್ಲಿ ಸೇರಿಸಲಾಯಿತು. ಇದಕ್ಕೆ ಮತ್ತಷ್ಟು ಬಲ ತುಂಬಿದ್ದು 2002 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ. ಹೀಗೆ ಜಾರಿಯಾದ ಪಕ್ಷಾಂತರ ಕಾಯ್ದೆ ದೇಶದಲ್ಲಿ ಸಾಕಷ್ಟು ಭಾರಿಗೆ ಬಂದಿದೆ.
ಪಕ್ಷಾಂತ ಎಂದರೆ
ಒಂದು ನಿರ್ಧಿಷ್ಟ ರಾಜಕೀಯ ಪಕ್ಷದ ಚಿಹ್ನೆಯಡಿಲ್ಲಿ ಆಯ್ಕೆಯಾಗುವ ಶಾಸಕ, ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ, ಇನ್ನೂಂದು ಪಕ್ಷಕ್ಕೆ ಹೋದರೆ ಅದರು ಪಕ್ಷಾಂತವಾಗುತ್ತದೆ. ಅಥಾವ ಶಾಸನ ಸಭೆಯಲ್ಲಿ ಮತದಾನ ನಡೆಯುವ ಅವಧಿಯಲ್ಲಿ ತನ್ನ ಪಕ್ಷ ವಿಫ್ ಜಾರಿ ಮಾಡಿದರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ ಎಂದಾದರೆ ಅದು
ಪ್ರಸ್ತುತ ಯಾಕೆ ಈ ಚರ್ಚೆ
ಶಾಸಕರೊಬ್ಬರು ಪಕ್ಷಾಂತರ ಮಾಡಿದ್ದಾರೋ, ಇಲ್ಲವೋ ಎಂದು ತೀರ್ಮಾನ ಮಾಡುವ ಅಧಿಕಾರ ಇರುವುದು ಸಭಾಧ್ಯಕ್ಷರಿಗೆ ಇರುತ್ತದೆ. ಪಕ್ಷಾಂತರ ಆಗಿದ್ದಿಯೋ, ಇಲ್ಲವೋ ಎಂದು ವಿಧಾನಸಭೆಯ ಸಭಾಧ್ಯಕ್ಷರು ತೀರ್ಮಾನಿಸುತ್ತಾರೆ. ಪ್ರಸ್ತುತ ವಿಧಾನಸಭಾ ಸಭ್ಯಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪಕ್ಷಾಂತರ ನಿಷೇಧ ಕಾಯ್ದೆಯ ನಿಯಮಗಳ ಮರು ಪರಿಶೀಲನೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಸಭೆ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.








