ಸೌದಿಯ ಮದೀನಾ ಮಸೀದಿಯಲ್ಲಿ ಪಾಕ್ ಪಿಎಂ ಗೆ ಚೋರ್ ಎಂದು ಘೋಷಣೆ ಕೂಗಿದ ಪಾಕಿಸ್ತಾನಿಗಳು…
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಮೂರು ದಿನಗಳ ಅಧಿಕೃತ ಭೇಟಿಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದು ಈ ವೇಳೆ ತಮ್ಮ ಕ್ಯಾಬಿನೆಟ್‌ನೊಂದಿಗೆ ಮದೀನಾದ ಪವಿತ್ರ ಮಸೀದಿ-ಎ-ನಬ್ವಿಗೆ ಹೋಗಿದ್ದು, ಅಲ್ಲಿದ್ದ ಪಾಕಿಸ್ತಾನಿಗಳು ಅವರನ್ನ ಕಂಡ ತಕ್ಷಣ ಚೋರ್ ಚೋರ್ ಎಂದು ಘೋಷಣೆ ಕೂಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸೌದಿ ರಾಜತಾಂತ್ರಿಕರೊಂದಿಗೆ ಪಾಕಿಸ್ತಾನಿ ಪ್ರಧಾನಿ ಮಸೀದಿ-ಎ-ನಬ್ವಿಯನ್ನು ತಲುಪುತ್ತಿದ್ದಂತೆ, ಜನರು ಅವರ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ್ದಾರೆ. ಚೋರ್ ಚೋರ್ ಎಂದು ಕೂಗತೊಡುಗುತ್ತಾರೆ. ಶಹಬಾಜ್ ಅವರ ಕ್ಯಾಬಿನೆಟ್ ಸಚಿವರು ಮಸೀದಿ ತಲುಪಿದಾಗಲೂ ಇದೇ ರೀತಿ ಘೋಷಣೆ ಕೂಗಿದ್ದಾರೆ.
ಈ ಪ್ರತಿಭಟನೆಯ ಹಿಂದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೈವಾಡವಿದೆ ಎಂದು ಪಾಕಿಸ್ತಾನದ ಮಾಹಿತಿ ಪ್ರಸಾರ ಸಚಿವೆ ಮರ್ಯಮ್ ಔರಂಗಜೇಬ್ ಹೇಳಿದ್ದಾರೆ. ಈ ಪವಿತ್ರ ಸ್ಥಳದಲ್ಲಿ ನಾನು ಆ ವ್ಯಕ್ತಿಯ ಹೆಸರನ್ನು ತೆಗೆದುಕೊಳ್ಳುವುದಿಲ್ಲ, ಏಕೆಂದರೆ ನಾನು ಈ ಸ್ಥಳವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದರು. ಇಮ್ರಾನ್ ಖಾನ್ ಪಾಕಿಸ್ತಾನದ ಸಮಾಜವನ್ನು ಹಾಳು ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ಕೆಲವರನ್ನ ಬಂಧಿಸಲಾಗಿದೆ.
ಪ್ರಧಾನಿಯಾದ ನಂತರ ಶಹಬಾಜ್ ಷರೀಫ್ ಸೌದಿ ಅರೇಬಿಯಾಕ್ಕೆ ಇದು ಮೊದಲ ಭೇಟಿಯಾಗಿದೆ. ಸೌದಿಯಿಂದ 3.2 ಬಿಲಿಯನ್ ಡಾಲರ್ ಸಾಲ ಪಡೆಯುವುದು ಅವರ ಗುರಿಯಾಗಿದೆ.








