ಇಂದು ವರ್ಷದ ಮೊದಲ ಸೂರ್ಯಗ್ರಹಣ, ಭಾರತದಲ್ಲಿ ಗೋಚರವಿಲ್ಲ…
ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 30 ಶನಿವಾರ ಅಂದರೆ ಇಂದು ಸಂಭವಿಸಲಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸದೆ ಇದ್ದರೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಪರಿಣಾಮ ತಟ್ಟಲಿದೆ.
ಭಾರತೀಯ ಕಾಲಮಾನದ ಪ್ರಕಾರ ಏಪ್ರಿಲ್ 30ರಂದು ಶನಿವಾರ ಮಧ್ಯಾಹ್ನ 12.15ಕ್ಕೆ ಆರಂಭವಾಗುವ ಗ್ರಹಣ, ಸಂಜೆ 4 ಗಂಟೆ 7 ನಿಮಿಷಕ್ಕೆ ಅಂತ್ಯವಾಗಲಿದೆ. ಭಾಗಶಃ ಸೂರ್ಯಗ್ರಹಣದ ಸಂಧರ್ಭದಲ್ಲಿ ಶನಿ ಅಮಾವಾಸ್ಯೆ ಇರುವುದರಿಂದ ಕೆಲ ಶನಿದೇಗುಲ ಸೇರಿದಂತೆ ಶಿವ ದೇಗುಲದಲ್ಲಿಯೂ ವಿಶೇಷ ಪೂಜೆಗಳು ನಡೆಯಲಿದೆ.
ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ ಚಿಲಿ, ಅರ್ಜೆಂಟೀನಾ, ಉರುಗ್ವೆ, ಆಗ್ನೇಯಾ ಪೆರು, ದಕ್ಷಿಣ ಹಾಗೂ ಪಶ್ಚಿಮ ಅಮೆರಿಕದಲ್ಲಿ ಗೋಚರಿಸಲಿದೆ. ಸೂರ್ಯನಿಗೆ ಅಥವಾ ಚಂದ್ರನಿಗೆ ಗ್ರಹಣ ಬಂದ್ರೆ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಮಾತ್ರವಲ್ಲದೇ ಪ್ರಕೃತಿಗೂ ಹಾನಿ, ಇನ್ನು ಇದೇ ದಿನ ಶನಿ ಅಮಾವಾಸ್ಯೆಯೂ ಇರುವುದರಿಂದ ಈ ಬಾರಿಯ ಸೂರ್ಯಗ್ರಹಣ ಹೆಚ್ಚು ಪ್ರಭಾವಶಾಲಿ ಅನ್ನೋದು ಜ್ಯೋತಿಷಿಗಳ ಮಾತು.
Today’s first eclipse of the year, Not seen in India …








