ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ | 50 ಜನರ ಸಾವು
ಅಪಘಾನಿಸ್ತಾನ: ಶಕ್ರವಾರ ಮಸೀದಿಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಪೋಟ್ ದಿಂದ 50 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಬೂಲ್ ನ ಪಶ್ಚಿಮದಲ್ಲಿರುವ ಖಲೀಫಾ ಸಾಹಿಬ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡು 50 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ ಎಂದು ಆಂತರಿಕ ಸಚಿವಾಲಯದ ಉಪ ವಕ್ತಾರ ಬೆಸ್ಮುಲ್ಲಾ ಹಬೀಬ್ ಹೇಳಿದರು.
ಪ್ರಾರ್ಥನೆಯ ನಂತರ ಸುನ್ನಿ ಮುಸ್ಲೀಮರು ಝಿಕ್ರ್ ಎಂದು ಕರೆಯಲ್ಪಡುವ ಸಭೆಯೊಂದಕ್ಕೆ ಜಮಾಯಿಸಿದಾಗ ಈ ದಾಳಿ ನಡೆದಿದೆ.







