MI vs RR | ಮುಂಬೈ ತಂಡಕ್ಕೆ ಧವಳ್ ಕುಲಕರ್ಣಿ..!!
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಈ ಐಪಿಎಲ್ ಋತುವಿನಲ್ಲಿ ಎಂಟು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಈಗಾಗಲೇ 8 ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ಸ್ ರೇಸ್ ನಿಂದ ಹೊರಬಿದ್ದಿದೆ.
ಆದ್ರೂ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಸೆಣಸಾಟ ನಡೆಸಲಿದೆ. ಈ ಪಂದ್ಯಕ್ಕೂ ಮುನ್ನ ತಂಡಕ್ಕೆ ಅನುಭವಿ ಬೌಲರ್ ಸೇರಿಕೊಂಡಿದ್ದಾರೆ.

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಗೆ ಬೌಲಿಂಗ್ ವಿಭಾಗ ಕೈ ಕೊಟ್ಟಿದೆ. ಹೀಗಾಗಿ ಇದೀಗ ತಂಡಕ್ಕೆ 33 ವರ್ಷದ ವೇಗದ ಬೌಲರ್ ಧವಲ್ ಕುಲಕರ್ಣಿ ಸೇರಿಕೊಂಡಿದ್ದಾರೆ.
ಪ್ರಮುಖ ಸೀಮರ್ ಬುಮ್ರಾ (8 ಪಂದ್ಯಗಳಲ್ಲಿ 5 ವಿಕೆಟ್) ಸೇರಿದಂತೆ ಜೈದೇವ್ ಉನದ್ಕತ್ (5 ಪಂದ್ಯಗಳಲ್ಲಿ 6 ವಿಕೆಟ್) ಮತ್ತು ಸ್ಯಾಮ್ಸ್ (5 ಪಂದ್ಯಗಳಲ್ಲಿ 6 ವಿಕೆಟ್) ಪಡೆದಿದ್ದಾರೆ. ಕುಲಕರ್ಣಿ ಸೇರ್ಪಡೆಯೊಂದಿಗೆ ಮುಂಬೈ ಬೌಲಿಂಗ್ ಗೆ ಹೊಸ ಜೋಷ್ ಬರಲಿದೆ.
mi-vs-rr-pacer-dhawal-kulkarni-joins-mumbai-indians-squad








