LSG vs DC Match Preview | ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ 11
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಇದು 15 ನೇ ಆವೃತ್ತಿಯ 45ನೇ ಪಂದ್ಯವಾಗಿದೆ. ಮುಂಬೈ ವಾಂಖೆಡೆ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ.
ಈ ಎರಡೂ ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ.
ಮೊದಲ ಸೆಣಸಾಟದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಡೆಲ್ಲಿಗೆ ಇದು ಸೇಡಿನ ಸಮರವಾಗಿದೆ.
ಈ ಬಾರಿಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈವರೆಗೂ ಎಂಟು ಪಂದ್ಯಗಳನ್ನಾಡಿದ್ದು, ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ರಿಷಬ್ ನೇತೃತ್ವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಿತ್ತು.
ಈ ಪಂದ್ಯದಲ್ಲಿ ಡೆಲ್ಲಿ ನಾಲ್ಕು ವಿಕೆಟ್ ಗಳಿಂದ ಜಯ ಸಾಧಿಸಿದ್ದು, ವಾರ್ನರ್ 42 ರನ್, ಕುಲ್ ದೀಪ್ 4 ವಿಕೆಟ್ ಪಡೆದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸದ್ಯ ಉತ್ತಮ ಗೆಲುವಿನ ಲಯದಲ್ಲಿರುವ ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆಲುವಿಗಾಗಿ ಗುದ್ದಾಟ ನಡೆಸಲಿವೆ.

ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ಸ್ ಗೆ ಹತ್ತಿರವಾಗೋದು ಉಭಯ ತಂಡಗಳ ಲೆಕ್ಕಾಚಾರವಾಗಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಡೆಲ್ಲಿ ತಂಡದಲ್ಲಿ ಒಗ್ಗಟ್ಟಿನ ಆಟದ ಕೊರತೆ ಕಾಣುತ್ತಿದೆ. ಬ್ಯಾಟಿಂಗ್ ನಲ್ಲಿ ಆರಂಭಿಕರನ್ನೇ ತಂಡ ಹೆಚ್ಚು ನಂಬಿಕೊಂಡಿದೆ. ಮುಖ್ಯವಾಗಿ ಡೇವಿಡ್ ವಾರ್ನರ್ ಮಾತ್ರ ಡೆಲ್ಲಿ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಪೃಥ್ವಿ ಶಾ ಅಬ್ಬರ ಕೇವಲ ಒಂದೆಡೆರಡು ಪಂದ್ಯಗಳಿಗೆ ಸೀಮಿತವಾಗಿದೆ. ಮಿಡಲ್ ಆರ್ಡರ್ ನಲ್ಲಿ ನಾಯಕ ರಿಷಬ್ ಪಂತ್, ಮಿಚೆಲ್ ಮಾರ್ಷ್ ಬ್ಯಾಟ್ ಅಬ್ಬರಿಸುತ್ತಿಲ್ಲ. ಇದು ತಂಡದ ಹಿನ್ನಡೆಗೆ ಕಾರಣವಾಗುತ್ತಿದೆ. ಆದ್ರೆ ಪೊವೆಲ್ ಫಾರ್ಮ್ ಗೆ ಬಂದಿರೋದು ತಂಡಕ್ಕೆ ನೆಮ್ಮದಿ ತಂದಿದೆ. ಇನ್ನು ಲಲಿತ್ ಯಾದವ್, ಅಕ್ಷರ್ ಪಟೇಲ್, ಶರ್ದೂಲ್ ಠಾಕೂರ್ ರನ್ ಗಳಿಸಿದ್ರೂ ಪಂದ್ಯವನ್ನು ಗೆಲ್ಲಿಸಿಕೊಡುವಂತಹ ಆಟವಾಡುತ್ತಿಲ್ಲ.
ಬೌಲಿಂಗ್ ವಿಚಾರಕ್ಕೆ ಬಂದರೇ ಕುಲ್ ದೀಪ್ ಯಾದವ್ ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಇವರಿಗೆ ಅಕ್ಷರ್ ಪಟೇಲ್ ಸಾಥ್ ನೀಡಬೇಕಿದೆ. ವೇಗದ ಬೌಲಿಂಗ್ ನಲ್ಲಿ ಮುಸ್ತಫಿಜೂರ್, ಚೇತನ್ ಸಕಾರಿಯಾ ವಿಕೆಟ್ ಬೇಟೆ ಶುರು ಮಾಡಿದ್ದು, ಶರ್ದೂಲ್ ಮಿಡಲ್ ಓವರ್ ಗಳಲ್ಲಿ ವಿಕೆಟ್ ಪಡೆಯಬೇಕಾಗಿದೆ.
ಪ್ಲೇಯಿಂಗ್ ಇಲೆವೆನ್ ಹೀಗಿದೆ.
ಪೃಥ್ವಿ ಶಾ
ಡೇವಿಡ್ ವಾರ್ನರ್
ಮಿಚೆಲ್ ಮಾರ್ಷ್
ರಿಷಭ್ ಪಂತ್ (c & wk)
ರೋವ್ಮನ್ ಪೊವೆಲ್
ಲಲಿತ್ ಯಾದವ್
ಅಕ್ಷರ್ ಪಟೇಲ್
ಶಾರ್ದೂಲ್ ಠಾಕೂರ್
ಕುಲದೀಪ್ ಯಾದವ್
ಮುಸ್ತಾಫಿಜುರ್ ರೆಹಮಾನ್
ಚೇತನ್ ಸಕರಿಯಾ
LSG vs DC Match Preview Delhi Capitals team playing 11








