LSG vs DC Match Preview | ಲಕ್ನೋ ತಂಡದ ಪ್ಲೇಯಿಂಗ್ ಇಲೆವೆನ್
ಪ್ಲೇ ಆಫ್ಸ್ ಮೇಲೆ ಕಣ್ಣಿಟ್ಟಿರುವ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.
ಇದು 15 ನೇ ಆವೃತ್ತಿಯ 45ನೇ ಪಂದ್ಯವಾಗಿದೆ. ಮುಂಬೈ ವಾಂಖೆಡೆ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ.
ಈ ಎರಡೂ ತಂಡಗಳು ಈ ಸೀಸನ್ ನಲ್ಲಿ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ.
ಮೊದಲ ಸೆಣಸಾಟದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರು ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಡೆಲ್ಲಿಗೆ ಇದು ಸೇಡಿನ ಸಮರವಾಗಿದೆ.
ರಾಹುಲ್ ನಾಯಕತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 9 ಪಂದ್ಯಗಳನ್ನಾಡಿದ್ದು, ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಿದ್ದು 20 ರನ್ ಗಳಲ್ಲಿ ಸೋಲು ಕಂಡಿತ್ತು.
ಕ್ವಿಂಟನ್ ಡಿ ಕಾಕ್ 46 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸದ್ಯ ಉತ್ತಮ ಗೆಲುವಿನ ಲಯದಲ್ಲಿರುವ ಉಭಯ ತಂಡಗಳು ಇಂದಿನ ಪಂದ್ಯದಲ್ಲಿ ಗೆಲುವಿಗಾಗಿ ಗುದ್ದಾಟ ನಡೆಸಲಿವೆ.

ಇಂದಿನ ಪಂದ್ಯ ಗೆದ್ದು ಪ್ಲೇ ಆಫ್ಸ್ ಗೆ ಹತ್ತಿರವಾಗೋದು ಉಭಯ ತಂಡಗಳ ಲೆಕ್ಕಾಚಾರವಾಗಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಲಕ್ನೋ ಸೂಪರ್ ಜೈಂಟ್ಸ್ ವಿಚಾರಕ್ಕೆ ಬಂದ್ರೆ ಇಲ್ಲೂ ಮಿಡಲ್ ಆರ್ಡರ್ ಸಮಸ್ಯೆ ಕಾಡುತ್ತಿದೆ. ಆರಂಭಿಕರಾದ ಕೆ.ಎಲ್.ರಾಹುಲ್, ಕ್ವಿಂಟನ್ ಡಿ ಕಾಕ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆದ್ರೆ ಮಿಡರ್ ಆರ್ಡರ್ ಬ್ಯಾಟರ್ ಗಳಿಂದ ಸ್ಥಿರ ಪ್ರದರ್ಶನ ಬರುತ್ತಿಲ್ಲ. ಮುಖ್ಯವಾಗಿ ಮಾರ್ಕಸ್ ಸ್ಟೋಯ್ನಿಸ್ ವೈಫಲ್ಯ ತಂಡಕ್ಕೆ ಮೈನಸ್ ಪಾಯಿಂಟ್ ಆಗಿದೆ. ಕೃನಾಲ್ ಪಾಂಡ್ಯ, ದೀಪಕ್ ಹೂಡಾ ಒಂದೆಡೆರಡು ಪಂದ್ಯಗಳಲ್ಲಿ ಮಿಂಚಿದ್ದಾರೆ. ಆದ್ರೆ ಅದನ್ನ ಮುಂದುವರೆಸಬೇಕಾಗಿದೆ. ಆಯುಷ್ ಬದೋನಿ ಕೂಡ ಮೊದಲಿನ ಟಚ್ ನಲ್ಲಿ ಕಾಣಿಸುತ್ತಿಲ್ಲ. ಜೇಸನ್ ಹೋಲ್ಡರ್ ಅವರಿಂದ ಕೂಡ ಆಲ್ ರೌಂಡರ್ ಆಟ ಬರಬೇಕಿದೆ. ಬೌಲಿಂಗ್ ನಲ್ಲಿ ಲಕ್ನೋ ತಂಡ ಬಲಿಷ್ಟವಾಗಿದೆ. ದುಷ್ಮಂತಾ ಚಮೀರಾ, ಮೊಹ್ನಿಸ್ ಖಾನ್, ಅವೇಶ್ ಖಾನ್ ವಿಕೆಟ್ ಪಡೆಯುತ್ತಿದ್ದಾರೆ. ಇವರಿಗೆ ಹೋಲ್ಡರ್, ಸ್ಟೋಯ್ನಿಸ್ ಸಾಥ್ ನೀಡಬೇಕಿದೆ. ರವಿ ಬಿಷ್ನೋಯಿ ದುಬಾರಿಯಾದ್ರೂ ವಿಕೆಟ್ ಪಡೆಯುತ್ತಿದ್ದಾರೆ.
ಪ್ಲೇಯಿಂಗ್ ಇಲೆವೆನ್
ಕ್ವಿಂಟನ್ ಡಿ ಕಾಕ್ (WK), ಕೆಎಲ್ ರಾಹುಲ್ (c), ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್, ಅವೇಶ್ ಖಾನ್, ರವಿ ಬಿಷ್ಣೋಯ್ LSG vs DC Match Preview Lucknow Team Playing Eleven








