ರಾಜ್ಯದಲ್ಲಿ BA.2.12 ಸೋಂಕು ಪತ್ತೆ ?? ಮತ್ತೆ ಹೆಚ್ಚಾಯ್ತು 4 ಅಲೆ ಆತಂಕ
ರಾಜ್ಯದಲ್ಲಿ ಕೋವಿಡ್ ನಾಲ್ಕನೆ ಅಲೆಗೆ ಒಮಿಕ್ರಾನ್ ಉಪ ರೂಪಾಂತರವಾದ BA.2.12 ಕಾರಣವಾಗುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿದೆ. ರಾಜ್ಯದಲ್ಲಿ BA.2.12 ರೂಪಾಂತರಿ ಪತ್ತೆಯಾಗಿದ್ದು ಮುಂದಿನ ದಿನಗಳಲ್ಲಿ ಈ ಕುರಿತು ವರದಿ ಬರುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ನಡೆಸುತ್ತಿರುವ ಜೀನೋಮ್ ಸೀಕ್ವೆನ್ಸ್ ಗಳಲ್ಲಿ ಒಮಿಕ್ರಾಣ್ ಉಪ ತಳಿಗಳಾದ BA.2.12 ಮತ್ತು BA.2.10 ಲಕ್ಷಣಗಳನ್ನ ಹೋಲುವ ಸೋಂಕು ಪತ್ತೆಯಾಗಿದೆ. ಈ ತಳಿಗಳಿಂದಲೇ ಈಗಾಗಲೇ ದೆಹಲಿಯಲ್ಲಿ ಸೋಂಕುಗಳು ಹೆಚ್ಚಾಗಿ ಹರಡುತ್ತಿವೆ.
ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ನಡೆಯುತ್ತಿರೋ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ಓಮಿಕ್ರಾನ್ ಉಪತಳಿಗಳಾದ BA.2.12 ಹಾಗೂ BA.2.10 ಹೋಲಿಕೆಯಿರುವಂತ ಉಪ ತಳಿಗಳು ಪತ್ತೆಯಾಗಿವೆ. ಆ ತಳಿಗಳು BA.2.12, BA.2.10 XE ತಳಿಗಳಾ ಎನ್ನುವ ಬಗ್ಗೆ ಮತ್ತಷ್ಟು ಮಾಹಿತಿ ಈ ಬಗ್ಗೆ ಕಲೆ ಹಾಕಲಾಗುತ್ತಿದೆ. ಅದು ಖಚಿತಗೊಂಡ್ರೇ, ಸೋಂಕಿತ ವ್ಯಕ್ತಿಯ ಸಂಪರ್ಕಿತರ ಕಾರ್ಯವನ್ನು ನಡೆಸಲಾಗುತ್ತದೆ ಎಂದರು.
ನಾವು ಟೆಸ್ಟ್ ಟ್ರಾಕ್ ಟ್ರೀಟ್ ಫಾರ್ಮುಲಾದಂತೆ ಹೆಚ್ಚಿನ ಪೋಕಸ್ ಮಾಡುತ್ತಿದ್ದೇವೆ ಕ್ಲಸ್ಟರ್ ಮಟ್ಟದಲ್ಲಿ ನಾವುಗಳು ಕೇಸ್ ಹೆಚ್ಚಾಗುವುದಕ್ಕೆ ಬಿಡುವುದಿಲ್ಲ ಎರಡನೇ ಅಲೆಯಲ್ಲಿ ಏನೆಲ್ಲ ಕ್ರಮಗಳನ್ನ ಕೈಗೊಂಡಿದ್ವಿ ಆ ಕ್ರಮಗಳನ್ನೇ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.








