PSI ಅಕ್ರಮ ಪ್ರಕರಣ : ಫಿಸಿಕಲ್ ಎಕ್ಸಾಮ್ ನಲ್ಲೂ ಅಕ್ರಮವಾಗಿದೆ – ಪ್ರಿಯಾಂಕ್ ಖರ್ಗೆ….
ಪಿಎಸ್ಐ ನೇಮಕಾತಿ ಅಕ್ರಮ ಥಿಯರೀ ಎಕ್ಸ್ಮಾಮ್ ನಿಂದ ಹಿಡಿದು ಫಿಸಿಕಲ್ ಎಕ್ಸಾಮ್ ವರೆಗೂ ತಲುಪುತ್ತಿದೆ. ಈಗಾಗಲೇ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದೆ. ಸರ್ಕಾರ ಮರು ಪರೀಕ್ಷೆ ನಡೆಸುವುದಾಗಿಯೂ ತಿಳಿಸಿದೆ. ಆದ್ರೆ ಈ ಮರು ಪರೀಕ್ಷೆ ಪೇಪರ್ ಒಂದಕ್ಕೋ, ಪೇಪರ್ ಎರಡಕ್ಕೋ ಅಥವಾ ಫಿಜಿಕಲ್ಗೂ ಇದೆಯೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ಬೆಳಗಾವಿ ಡಿಎಆರ್ ಮೈದಾನದಲ್ಲಿ ಉಮೇಶ್ ಎಂಬ ವ್ಯಕ್ತಿ ತಲೆ ಮೇಲೆ ಕಪ್ಪು ಬಣ್ಣದ ವಸ್ತು ಇಟ್ಟು ಪರೀಕ್ಷೆ ಪಾಸಾಗಲು ಬಂದು ಸಿಕ್ಕಿ ಬಂದಿದ್ದಾನೆ. ಈತ ಹೈಟ್ ಇರದ ಹಿನ್ನೆಲೆ ತಲೆ ಮೇಲೆ ಥರ್ಮಾಕೂಲ್ ಹಾಕಿ ಅದರ ಮೇಲೆ ವಿಗ್ ಹಾಕಿ ಪರೀಕ್ಷೆಗೆ ಬಂದಿದ್ದಾನೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಎಸ್‍ಐ ನೇಮಕಾತಿಯಲ್ಲಿ ಮರುಪರೀಕ್ಷೆ ನೋಟಿಫಿಕೇಶನ್ ಹೊರಡಿಸಿದೆ. ಸದ್ಯ ರಿಟರ್ನ್ ಎಕ್ಸಾಂಗೇ ಮಾತ್ರ ರೀ ಎಕ್ಸಾಂ ಅಂತಾ ಸರ್ಕಾರ ಹೇಳಿದೆ. ಆದರೆ ದೈಹಿಕ ಪರೀಕ್ಷೆಯಲ್ಲಿ ಸಹ ಅಕ್ರಮ ನಡೆದಿದೆ ಅಂತಾ ಅಭ್ಯರ್ಥಿಗಳು ದೂರು ನೀಡಿದ್ರು. ಇದರ ಬಗ್ಗೆ ನಾನು ಮಾತನಾಡಿದ್ರೆ ಹಿಟ್ & ರನ್ ಅಂದ್ರು. ಸರ್ಕಾರದ ಬಳಿ ದೂರುಗಳು, ದಾಖಲೆಗಳು ಇಲ್ವಾ. ಬೆಳಗಾವಿ ರೂರಲ್ & ನಗರದಲ್ಲಿ ಎರಡು ಪ್ರತ್ಯೇಕ ಎಫ್‍ಐಆರ್ ಮಾಡಿದೆ ಎಂದರು.
ಸದ್ಯಕ್ಕೆ ಒಂದು ಪರೀಕ್ಷಾ ಕೇಂದ್ರದ ಬಗ್ಗೆ ಮಾತ್ರ ಗಮನಹರಿಸಲಾಗಿದೆ ಅಷ್ಟೇ. ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳ ಬಗ್ಗೆಯೂ ತನಿಖೆ ಮಾಡಬೇಕು. 250ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರದವರೇ ಹೇಳ್ತಿದ್ದಾರೆ. 545 ಜನರಲ್ಲಿ ದೈಹಿಕ ಪರೀಕ್ಷೆ ಪಾಸಾದವರೆಷ್ಟು?. ಯಾರ ಯಾರ ಮೇಲೆ ದೂರಿದೆ, ಅವರ ದೈಹಿಕ ಪರೀಕ್ಷೆ ಮತ್ತೊಮ್ಮೆ ಮಾಡಿ ಎಂದು ಸುದ್ದಿಗೋಷ್ಟಿಯಲ್ಲಿ ಖರ್ಗೆ ಹೇಳಿದರು..








