RCB ಗೆ ಮತ್ತೆ ವಿರಾಟ್ ಕ್ಯಾಪ್ಟನ್..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಮತ್ತೆ ನಾಯಕರಾಗುತ್ತಾರಾ…? ಎಂಬ ಕುತೂಹಲಕಾರಿ ಪ್ರಶ್ನೆ ಸದ್ಯ ಆರ್ ಸಿಬಿ ಅಭಿಮಾನಿಗಳಲ್ಲಿ ಮೂಡಿದೆ.
ಯಾಕಂದರೇ ಬೆಂಗಳೂರು ತಂಡದಲ್ಲಿ ಘಟಾನುಘಟಿ ಆಟಗಾರರಿದ್ದರೂ ಎಲ್ಲರ ಚಿತ್ತ ಮಾತ್ರ ವಿರಾಟ್ ಕೊಹ್ಲಿಯತ್ತ ನೆಟ್ಟಿರುತ್ತದೆ.
ಮೈದಾನದಲ್ಲಿ ಆರ್ ಸಿಬಿ ಆಡುತ್ತಿದ್ದರೇ ಟಿವಿ, ಮೊಬೈಲ್ ನಲ್ಲಿ ಹಾಗೆ ಮೈದಾನದಲ್ಲಿ ಪಂದ್ಯ ನೋಡುತ್ತಿರುವವರು ಮೊದಲು ಹುಡುಕೋದು ವಿರಾಟ್ ಕೊಹ್ಲಿ ಅವರನ್ನ.
ವಿರಾಟ್ ಕೊಹ್ಲಿ ಆಟಗಾರರನ್ನ ಪ್ರೋತ್ಸಾಹಿಸೋದು.. ವಿಕೆಟ್ ಬಿದ್ದಾಗ ಚೀರುವುದು.. ಪಂದ್ಯ ಗೆದ್ದಾಗ ಸಂಭ್ರಮಿಸೋದನ್ನ ನೋಡಲು ಆರ್ ಸಿಬಿಯನ್ಸ್ ಎದುರು ನೋಡುತ್ತಿರುತ್ತಾರೆ. ಒಂದೇ ಮಾತಿನಲ್ಲಿ ಹೇಳೋದಾದ್ರೆ ಆರ್ ಸಿಬಿ ಅಂದ್ರೆ ವಿರಾಟ್, ವಿರಾಟ್ ಅಂದ್ರೆ ಆರ್ ಸಿಬಿ…!!
ಆದ್ರೆ ಕಳೆದ ವರ್ಷ ವಿರಾಟ್ ಕೊಹ್ಲಿ ಆರ್ ಸಿಬಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಯುತ್ತಿದ್ದಂತೆ ಕೋಟ್ಯಾಂತರ ಆರ್ ಸಿಬಿಯನ್ಸ್ ಹೃದಯ ಚೂರಾಗಿತ್ತು.
ವಿರಾಟ್ ಕೊಹ್ಲಿ ಮತ್ತೆ ನಾಯಕರಾಗಬೇಕು ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ದಕ್ಷಿಣ ಆಫ್ರಿಕಾದ ಆಟಗಾರ ಫಾಫ್ ಡುಪ್ಲಸಿಸ್ ಆರ್ ಸಿಬಿ ನಾಯಕರಾದ್ರು.
ಇದು ಆರ್ ಸಿಬಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ, ಹಾಗೇ ಅವರ ನಾಯಕತ್ವದ ಮೇಲೆ ಆರ್ ಸಿಬಿ ಫ್ರಾಂಚೈಸಿ ಮತ್ತು ಅಭಿಮಾನಿಗಳಿಗೆ ಸಾಕಷ್ಟು ನಂಬಿಕೆ ಇದೆ. ಇದೇ ಕಾರಣಕ್ಕೆ ಆರ್ ಸಿಬಿಯನ್ಸ್ ಫಾಫ್ ಡುಪ್ಲಸಿಸ್ ಅವರನ್ನ ಲಯನ್ ಅಂತಾ ಕರೆಯುತ್ತಿದ್ದಾರೆ.

ಆದ್ರೆ ಇದೀಗ ಏಕಾಏಕಿ ಆರ್ ಸಿಬಿಗೆ ಮತ್ತೆ ವಿರಾಟ್ ಕೊಹ್ಲಿ ನಾಯಕರಾಗುತ್ತಾರಾ ಎಂಬ ಪ್ರಶ್ನೆ ಮುನ್ನಲೆಗೆ ಬಂದು ಬಿಟ್ಟಿದೆ.
ಇದಕ್ಕೆ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ಮತ್ತೆ ಕ್ಯಾಪ್ಟನ್ ಆಗಿದ್ದು, ನಿಜ.. ವಿರಾಟ್ ರಂತೆ ಧೋನಿ ಕೂಡ ಈ ಆವೃತ್ತಿಗೂ ಮುನ್ನ ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿದ್ದರು.
ಅವರ ಸ್ಥಾನದಲ್ಲಿ ಜಡೇಜಾ ತಂಡವನ್ನು ಮುನ್ನಡೆಸಿದ್ದರು. ಆದ್ರೆ ಇದೀಗ ಮತ್ತೆ ಧೋನಿ ಚೆನ್ನೈ ತಂಡದ ಸಾರಥ್ಯವಹಿಸಿದ್ದಾರೆ. ಹೀಗಾಗಿ ಧೋನಿಯಂತೆ ವಿರಾಟ್ ಕೊಹ್ಲಿ ಮತ್ತೆ ನಾಯಕರಾಗುತ್ತಾರಾ..? ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.
ಇದಕ್ಕೆ ಕಾರಣವೂ ಇದೆ. ಅದು ಏನಂದರೇ ಈ ಹಿಂದೆ ಒತ್ತಡದಿಂದಾಗಿ ವಿರಾಟ್ ಕೊಹ್ಲಿ ಆರ್ ಸಿಬಿ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದರು. ಇದೀಗ ಟೀಂ ಇಂಡಿಯಾದ ನಾಯಕತ್ವದ ಒತ್ತಡ ಅವರ ಮೇಲೆ ಇಲ್ಲ.
ಹೀಗಾಗಿ ಅವರು ಮತ್ತೆ ನಾಯಕರಾಗಬಹುದು ಎಂಬೋದು ಹಲವರ ವಾದವಾಗಿದೆ. ಇನ್ನೂ ಕೆಲವರು ವಿರಾಟ್ ಕೊಹ್ಲಿ ಒಂದು ಬಾರಿ ನಿರ್ಧಾರ ತೆಗೆದುಕೊಂಡರೇ ಮುಗೀತು, ಅವರು ಮತ್ತೆ ನಾಯಕರಾಗಲ್ಲ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಮತ್ತೆ ಆರ್ ಸಿಬಿ ತಂಡದ ನಾಯಕರಾಗೋತ್ತಾರೋ ಇಲ್ಲವೋ ಆದ್ರೆ ಆರ್ ಸಿಬಿ ಫ್ರಾಂಚೈಸಿ ಇರುವವರೆಗೂ ಅವರು ತಂಡದ ಲೀಡರ್ ಆಗಿರುತ್ತಾರೆ.








