ಯುರೋಪ್ ಪ್ರವಾಸದ ಹಂತದ ಭಾಗವಾಗಿ ಡೆನ್ಮಾರ್ಕ್ ತಲುಪಿದ ಮೋದಿ
ಯುರೋಪ್ : ಯುರೋಪ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ, ಪ್ರವಾಸದ ಎರಡನೇ ಹಂತದ ಭಾಗವಾಗಿ ಇಂದು ಡೆನ್ಮಾರ್ಕ್ ಗೆ ತರಲುಪಿದ್ದಾರೆ.
ಈ ಕುರಿತು ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಟ್ವೀಟ್ ಮಾಡಿದ್ದು, ಪ್ರಧಾನಿ ಮೋದಿ ಅವರ ಯುರೋಪ್ ನ ಮೂರು ದೇಶಗಳ ಪ್ರವಾಸದ ಮೊದಲ ಹಂತ ಮುಕ್ತಾಯಗೊಂಡಿದ್ದು, ಮುಂದಿನ ನಿಲ್ದಾಣ ಡೆನ್ಮಾರ್ಕ್-ಕೋಪನ್ ಹ್ಯಾಗನ್ ಎಂದು ಹೇಳಿ, ಎರಡು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
https://twitter.com/MEAIndia/status/1521434219188146177
ಹಾಗೇ ಪ್ರಧಾನಿ ಮೋದಿ ಜರ್ಮನಿಯಿಂದ ಹೊರಡುವ ಮುಂಚೆ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಟ್ವೀಟ್ ನಲ್ಲಿ ನಾನು ಜರ್ಮನಿಗೆ ಭೇಟಿ ಕೊಟ್ಟಿದ್ದು ಫಲಪ್ರಧವಾಗಿದೆ. ಇಲ್ಲಿನ ಚಾನ್ಸೆಲರ್ ಬುಂಡೆಸ್ಕಾಂಜ್ಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ವಿಸ್ತಾರವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಾಯಿತು, ಅಂತರ್ ಸರಕಾರ ಸಮಾಲೋಚನೆಗಳು ನಡೆದವು. ಹಾಗೇ, ಇಲ್ಲಿರುವ ಭಾರತೀಯ ಉದ್ಯಮಿಗಳು, ಸಮುದಾಯದ ಮುಖಂಡರ ಜತೆಗೆ ಮಾತುಕತೆಗೆ ಅವಕಾಶ ಸಿಕ್ಕಿದ್ದು ಖುಷಿಯಾಯಿತು ಎಂದು ಹೇಳಿದ್ದಾರೆ.








