RCB vs CSK Match | ಅಬ್ಬಬ್ಬಾ ಡಬಲ್ ಲಾಟರಿ.. CSK ಮನೆಗೆ.. RCB ಪ್ಲೇ ಆಫ್ಸ್ ಗೆ
ಪುಣೆಯ ಎಂಸಿಎ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಆರ್ ಸಿಬಿ ಲಯನ್ಸ್ ಮುಟ್ಟಿ ನೋಡಿಕೊಳ್ಳುವ ಆಘಾತ ನೀಡಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಇದು ಆರ್ ಸಿಬಿ ಮತ್ತು ಆರ್ ಸಿಬಿ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದೆ.
ಹೌದು..!! ಬೆಂಗಳೂರು ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಪಂದ್ಯ ಬಹಳ ಮುಖ್ಯವಾಗಿತ್ತು. ಪುಣೆಯಲ್ಲಿ ಡು ಆರ್ ಡೈ ಎಂಬ ಪರಿಸ್ಥಿತಿಯಲ್ಲಿ ಆರ್ಸಿಬಿ ಕಣಕ್ಕೆ ಇಳಿದಿತ್ತು. ಯಾಕಂದರೇ ಆ ಸೀಸನ್ ನಲ್ಲಿ ಆರ್ ಸಿಬಿ ಪ್ಲೇ ಆಫ್ಸ್ ಪ್ರವೇಶಿಸಬೇಕಾದರೇ ಚೆನ್ನೈ ವಿರುದ್ದದ ಗೆಲುವು ತುಂಬಾ ಅನಿವಾರ್ಯವಾಗಿತ್ತು. ಹೀಗಾಗಿ ಚೆನ್ನೈ ವಿರುದ್ಧ ಗೆಲುವು ಆರ್ ಸಿಬಿಗೆ ಬೆಟ್ಟದಷ್ಟು ಆತ್ಮವಿಶ್ವಾಸವನ್ನು ಮೂಡಿಸಿದೆ.
ಇದೇನು ಚೆನ್ನೈ ವಿರುದ್ಧ ಗೆದ್ದ ಮಾತ್ರಕ್ಕೆ ಆರ್ ಸಿಬಿ ಅಂತಿಮ ಘಟ್ಟ ತಲುಪುತ್ತಾ…? ಅನ್ನೋ ಪ್ರಶ್ನೆಗೆ ಉತ್ತರ ಇಲ್ಲವೇ ಇಲ್ಲ. ಕೇವಲ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ಮಾತ್ರಕ್ಕೆ ಆರ್ ಸಿಬಿ ಪ್ಲೇ ಆಫ್ಸ್ ಗೆ ಎಂಟ್ರಿ ಕೊಡಲ್ಲ, ಆದ್ರೆ ಸಿಎಸ್ ಕೆ ವಿರುದ್ಧದ ಗೆಲುವು ತಂಡಕ್ಕೆ ಆನೆಬಲವನ್ನು ತಂದಿದೆ.
ಯಾಕಂದರೇ ಈ ಪಂದ್ಯಕ್ಕೂ ಮುನ್ನಾ ಆರ್ ಸಿಬಿ ತಂಡ ಸತತವಾರಿ ಮೂರು ಪಂದ್ಯಗಳಲ್ಲಿ ಅತ್ಯಂತ ಹೀನಾಯವಾಗಿ ಸೋಲು ಕಂಡಿತ್ತು. ಮುಖ್ಯವಾಗಿ ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ವಿರುದ್ಧದ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಆರ್ ಸಿಬಿಯ ಬ್ಯಾಟರ್ ಗಳ ತಾಕತ್ತನ್ನ ಪ್ರಶ್ನೆ ಮಾಡಿದಂತೆ ಇತ್ತು. ಇತ್ತ ಗುಜರಾತ್ ಟೈಟಾನ್ಸ್ ವಿರುದ್ಧ ಪಂದ್ಯದಲ್ಲಿ ಆರ್ ಸಿಬಿ ಬೌಲರ್ ಗಳು ವಿಫಲರಾಗಿದ್ದರು. ಹೀಗಾಗಿ ಈ ಎರಡೂ ಕೆಟ್ಟ ಪ್ರದರ್ಶನದ ನೆನಪಿನಿಂದ ಆರ್ ಸಿಬಿ ಬೇಗ ವಾಪಸ್ ಬರಬೇಕಿತ್ತು. ಅದನ್ನೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಂಗಳೂರು ತಂಡ ಮಾಡಿ ತೋರಿಸಿದೆ.
ಇದಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಮಾನಸಿಕವಾಗಿ ಆರ್ ಸಿಬಿ ಆಟಗಾರರಿಗೆ ನಿರಾಳವನ್ನು ತಂದಿದೆ. ಯಾಕಂದರೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಳೆದ ಎರಡು ವರ್ಷಗಳಿಂದ ಆರ್ ಸಿಬಿ ಗೆಲುವು ಸಾಧಿಸಿದ್ದೇ ಇಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಸತತ ವಾಗಿ ಐದು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಈ ಮೂಲಕ ಚೆನ್ನೈ ಮಾನಸಿಕವಾಗಿ ಆರ್ ಸಿಬಿ ಮೇಲೆ ಪ್ರಾಬಲ್ಯ ಸಾಧಿಸಿತ್ತು. ಆದ್ರೆ ಪುಣೆಯ ಅಂಗಳದಲ್ಲಿ ಚೆನ್ನೈ ತಂಡವನ್ನು ಮಣಿಸುವ ಮೂಲಕ ಆ ಒತ್ತಡದಿಂದ ಆರ್ ಸಿಬಿ ಹೊರ ಬಂದಿದೆ.
ಇನ್ನು ಸಸತ ಮೂರು ಪಂದ್ಯಗಳಲ್ಲಿ ಸೋತಿದ್ದ ಆರ್ ಸಿಬಿಗೆ ಚೆನ್ನೈ ವಿರುದ್ದದ ಗೆಲುವು ಬೂಸ್ಟ್ ನೀಡಿದೆ. ಅದರಲ್ಲೂ ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡವನ್ನ ಸೋಲಿದ್ದು, ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಸೆಣಸಲು ಆರ್ ಸಿಬಿ ಗೆ ಪ್ರೋತ್ಸಾಹವನ್ನ ನೀಡಿದೆ.
ಇತ್ತ ಚಾಲೆಂಜರ್ಸ್ ವಿರುದ್ಧ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡ 15ನೇ ಆವೃತ್ತಿಯಲ್ಲಿ ಇನ್ಮುಂದೆ ಮಾನ ಉಳಿಸಿಕೊಳ್ಳಲು ಹೋರಾಡಬೇಕಿದೆ.rcb-vs-csk-match-rcb beat csk by 13 runs









