IPL 2022 : ರವೀಂದ್ರ ಜಡೇಜಾ ಫಾರ್ಮ್ ಬಗ್ಗೆ ಆತಂಕ..!!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ನಿರಾಸೆ ಮೂಡಿಸಿದ್ದಾರೆ.
ಆರ್ಸಿಬಿ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 5 ಎಸೆತಗಳನ್ನು ಎದುರಿಸಿದ ಜಡೇಜಾ ಕೇವಲ ಮೂರು ರನ್ ಮಾಡಿ ಪೆವಿಲಿಯನ್ ಸೇರಿಕೊಂಡರು.
ಈ ವರ್ಷದ ಋತುವಿನ ಆರಂಭದ ಮೊದಲು ಧೋನಿ CSK ನಾಯಕತ್ವದಿಂದ ಕೆಳಗಿಳಿದರು.
ಈ ವೇಳೆ ಜಡೇಜಾ ಚೆನ್ನೈ ತಂಡದ ಸಾರಥ್ಯವಹಿಸಿದ್ದರು. ಆದ್ರೆ ಸತತ ವೈಫಲ್ಯಗಳಿಂದಾಗಿ ಜಡೇಜಾ ನಾಯಕತ್ವದಿಂದ ಕೆಳಗಿಳಿದಿದ್ದು, ಧೋನಿ ನಾಯಕರಾಗಿದ್ದಾರೆ.
ನಾಯಕತ್ವ ಒತ್ತಡದಿಂದಲೋ ಏನೋ ರವೀಂದ್ರ ಜಡೇಜಾ ಬ್ಯಾಟಿಂಗ್ ಮತ್ತು ಬೌಲಿಗ್ ನಲ್ಲಿ ವಿಫಲರಾಗಿದ್ದಾರೆ.
ಈ ಋತುವಿನಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿರುವ ಜಡ್ಡು ಕೇವಲ 116 ರನ್ ಗಳಿಸಿದ್ದಾರೆ.
ಜಡೇಜಾ ಅವರ ಫಾರ್ಮ್‌ಗೆ ಸಿಎಸ್‌ಕೆ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಪ್ರತಿಕ್ರಿಯಿಸಿದ್ದಾರೆ.
ಜಡೇಜಾ ಅವರ ಫಾರ್ಮ್ ಬಗ್ಗೆ ಹೆಚ್ಚು ಚಿಂತಿಸಿಲ್ಲ ಎಂದು ಫ್ಲೆಮಿಂಗ್ ಹೇಳಿದ್ದಾರೆ.
ನಾನು ಜಡೇಜಾ ಫಾರ್ಮ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.
ಟಿ 20ಯಲ್ಲಿ ಆಡುವುದು ಅಷ್ಟು ಸುಲಭವಲ್ಲ. ಅವರು ಶೀಘ್ರದಲ್ಲೇ ಫಾರ್ಮ್‌ಗೆ ಮರಳುತ್ತಾರೆ ಎಂದು ಭಾವಿಸುತ್ತೇವೆ.
ಬ್ಯಾಟ್ಸ್ ಮನ್ 5 ಅಥವಾ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರೆ.. ಅವರಿಗೆ ನೆಲೆ ನಿಲ್ಲಲು ಹೆಚ್ಚು ಸಮಯ ಇರುವುದಿಲ್ಲ.
ಹಾಗಾಗಿ ಹೊಡೆಯುವ ಕ್ರಮದಲ್ಲಿ ವಿಕೆಟ್ ಕಳೆದುಕೊಳ್ಳುವ ಅವಕಾಶವಿದೆ.
ಮುಂಬರುವ ಪಂದ್ಯಗಳಲ್ಲಿ ನಾವು ನಮ್ಮ ಬ್ಯಾಟಿಂಗ್ ಕ್ರಮಾಂಕದ ಮೇಲೆ ಗಮನಹರಿಸುತ್ತೇವೆ ಎಂದು ಫ್ಲೆಮಿಂಗ್ ಹೇಳಿದರು. ipl-2022-i-am-not-concerned-about-ravindra-jadeja