ಧಾರವಾಡ/ಹುಬ್ಬಳ್ಳಿ : ಎರಡು ಟ್ರಕ್ ಮೂಲಕ ಚಿತ್ರದುರ್ಗದಿಂದ ರಾಯಘಡಕ್ಕೆ ಪ್ರಯಾಣ ಬೆಳೆಸಿದ್ದ 184 ವಲಸೆ ಕಾರ್ಮಿಕರಿಗೆ ಹುಬ್ಬಳ್ಳಿ ತಾಲೂಕು ಆಡಳಿತ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿ ಅವರನ್ನು ಕಳುಹಿಸಿಕೊಟ್ಟಿದೆ.
ನಿನ್ನೆ 184 ವಲಸೆ ಕಾರ್ಮಿಕರು ಚಿತ್ರದುರ್ಗದಿಂದ ರಾಯಘಡಕ್ಕೆ ಪ್ರಯಾಣ ಬೆಳಸಿದ್ದರು. ಇದರ ಮಾಹಿತಿ ಪಡೆದ ಪೊಲೀಸರು ವರೂರ- ಅಗಡಿ ಚೆಕ್ಪೋಸ್ಟ್ ಬಳಿ ಲಾರಿಯನ್ನು ತಪಾಸಣೆ ನಡೆಸಿ ವಲಸೆ ಕಾರ್ಮಿಕರನ್ನು ವಶಕ್ಕೆ ಪಡೆದಿದ್ದರು.
ಬಳಿಕ ಎಲ್ಲರನ್ನು ವೈದ್ಯಕೀಯ ಪರೀಕ್ಷೆ ನಡೆಸಿ ಎಸ್ಪಿ ವರ್ತಿಕಾ ಕಟಿಯಾರ್ ನೇತೃತ್ವದಲ್ಲಿ ಅವರಿಗೆ ಅಗತ್ಯ ಸುರಕ್ಷಾ ವ್ಯವಸ್ಥೆಯೊಂದಿಗೆ 6 ಸಾರಿಗೆ ಬಸ್ ಗಳ ವ್ಯವಸ್ಥೆ ಮಾಡಿ ರಾಯಘಡಕ್ಕೆ ಕಳುಹಿಸಿ ಕೊಡಲಾಗಿದೆ.
ಅಲ್ಲದೆ ವಲಸೆ ಕಾರ್ಮಿಕರಿಗೆ ಹುಬ್ಬಳ್ಳಿ ತಾಲೂಕು ಆಡಳಿತದ ವತಿಯಿಂದ ಉಪಹಾರ ಸೇರಿದಂತೆ ಹಲವಾರು
ವ್ಯವಸ್ಥೆ ಮಾಡಿಕೊಡಲಾಗಿದೆ.
ಇನ್ನು ಅಕ್ರಮವಾಗಿ ಜನರನ್ನು ಸಾಗಾಟ ಮಾಡಿದ 2 ಟ್ರಕ್ಗಳನ್ನು ಜಪ್ತಿ ಮಾಡಿದ್ದು, ಅದರ ಚಾಲಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.








