ನವೋದಯ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ | ವಿದ್ಯಾರ್ಥಿಗಳ ಆರೋಪ
ತುಮಕೂರು : ನವೋದಯ ಶಾಲೆಗೆ ಉಚಿತ ಪ್ರವೇಶ ಕಲ್ಪಿಸಲು ನಡೆಯೋ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಆರೋಪಿಸುತ್ತಿದ್ದಾರೆ.
PSI ಪರೀಕ್ಷೆ ಅಕ್ರಮ ನೇಮಕಾತಿ ಪ್ರಕರಣ ಮಾಸುವ ಮುನ್ನವೇ ಮೊತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್ 30ರಂದು ತುಮಕೂರಿನ ಮೂರು ಕೇಂದ್ರಗಳಲ್ಲಿ ನಡೆದ ಜವಾಹರ್ ಲಾಲ್ ನೆಹರೂ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಲಾಗುತ್ತಿದೆ.
ಈ ಪ್ರವೇಶ ಪರೀಕ್ಷೆಯನ್ನು 6ನೇ ತರಗತಿ ವಿದ್ಯಾರ್ಥಿಗಳು ಬರೆದಿದ್ದು, ಪರೀಕ್ಷೆ ಸಮಯದಲ್ಲಿ ಕೊಠಡಿ ಮೇಲ್ವಿಚಾರಕರು ಕೈಯಲ್ಲಿ ಉತ್ತರ ಬರೆದುಕೊಂಡು ಬಂದು ಆಯ್ದ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದಾರೆ. ಹಾಗೇ ವಿದ್ಯಾರ್ಥಿಗಳಗೆ ಹೆಸರು,ಸಹಿ,ರೋಲ್ ನಂ ಹಾಗೂ ಇತರೆ ವಿವರಗಳನ್ನು ಬರೆಯದಂತೆ ಒತ್ತಡ ಹೇರಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆರೋಪ ಮಾಡಿದ್ದಾರೆ.
ಅಲ್ಲದೇ ಒ.ಎಂ.ಆರ್ ಶೀಟನ್ನು ಸಂಪೂರ್ಣವಾಗಿ ಕೊಠಡಿ ಮೇಲ್ವಿಚಾರಕರು ತುಂಬಿದ್ದಾರೆ. ಇದರಲ್ಲಿ ಕೊಠಡಿ ಮೇಲ್ವಿಚಾರಕರು ಭಾಗಿಯಾಗಿದ್ದಾರೆ. ನಮಗೆ ಮೋಸವಾಗಿದೆ. ಹೀಗಾಗಿ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ದ ಕಠೀಣ ಕ್ರಮ ಕೈಗೊಳ್ಳಿ. ಹೀಗಾಗಿ ಮರು ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಗೆ ಮಕ್ಕಳು ಹಾಗೂ ಪೋಷಕರು ಮನವಿ ಸಲ್ಲಿಸಿದ್ದಾರೆ.