LSG vs KKR Match | ಲಕ್ನೋ ಸೂಪರ್ ಜೈಂಟ್ಸ್ ತಂಡದ ಪ್ಲೇಯಿಂಗ್ 11
ಶನಿವಾರದ ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಗುದ್ದಾಟ ನಡೆಸಲಿವೆ.
ಇದು ಇಂಡಿಯನ್ ಪ್ರಿಮಿಯರ್ ಲೀಗ್ 53ನೇ ಪಂದ್ಯವಾಗಿದೆ. ಈ ಪಂದ್ಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಪ್ಲೇ ಆಫ್ಸ್ ದೃಷ್ಠಿಯಿಂದ ಈ ಪಂದ್ಯದಲ್ಲಿ ಗೆಲುವು ಉಭಯ ತಂಡಗಳಿಗೂ ಅನಿವಾರ್ಯವಾಗಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲುವಿಗಾಗಿ ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲಿದೆ.
ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಸೀಸನ್ ನಲ್ಲಿ ಈವರೆಗೂ 10 ಪಂದ್ಯಗಳನ್ನಾಡಿದೆ.
ಈ ಪೈಕಿ ಏಳು ಪಂದ್ಯಗಳನ್ನ ಗೆದ್ದು, ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ.
ಹೀಗಾಗಿ ಅಂಕಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಅಂದಹಾಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಿತ್ತು.
ಈ ಪಂದ್ಯದಲ್ಲಿ ಲಕ್ನೋ ತಂಡ ಆರು ರನ್ ಗಳಿಂದ ಗೆಲುವು ಸಾಧಿಸಿದೆ.
ಲಕ್ನೋ ಪರ ಕೆ.ಎಲ್.ರಾಹುಲ್ 77 ರನ್, ದೀಪರ್ ಹೂಡಾ 52 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ
ಲಕ್ನೋ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸಾಲಿಡ್ ಆಗಿದೆ.
ಆರಂಭಿಕರಾಗಿ ಬರುವ ಕೆ.ಎಲ್.ರಾಹುಲ್, ಕ್ವಿಂಟನ್ ಡಿ ಕಾಕ್ ಉತ್ತಮ ಆರಂಭ ನೀಡುತ್ತಿದ್ದಾರೆ.
ಇದು ತಂಡದ ಪ್ಲಸ್ ಪಾಯಿಂಟ್ ಆಗಿದೆ. ಮಿಡಲ್ ಆರ್ಡರ್ ನಲ್ಲಿ ದೀಪಕ್ ಹೂಡಾ, ಕೃನಾಲ್ ಪಾಂಡ್ಯ ತಂಡಕ್ಕೆ ಆಧಾರವಾಗುತ್ತಿದ್ದಾರೆ.
ಆದ್ರೆ ಮಾರ್ಕಸ್ ಸ್ಟೋಯ್ನಿಸ್ ವೈಫಲ್ಯ ತಂಡಕ್ಕೆ ಮೈನಸ್ ಪಾಯಿಂಟ್ ಆಗಿದೆ.
ಆಯುಷ್ ಬದೋನಿ ಕೂಡ ಮೊದಲಿನ ಟಚ್ ನಲ್ಲಿ ಕಾಣಿಸುತ್ತಿಲ್ಲ.
ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್ ಅವರಿಂದ ಕೂಡ ಆಲ್ ರೌಂಡರ್ ಆಟ ಬರಬೇಕಿದೆ.
ಬೌಲಿಂಗ್ ನಲ್ಲಿ ಲಕ್ನೋ ತಂಡ ಬಲಿಷ್ಟವಾಗಿದೆ. ದುಷ್ಮಂತಾ ಚಮೀರಾ, ಮೊಹ್ನಿಸ್ ಖಾನ್, ಅವೇಶ್ ಖಾನ್ ವಿಕೆಟ್ ಪಡೆಯುತ್ತಿದ್ದಾರೆ.
ಇವರಿಗೆ ಹೋಲ್ಡರ್, ಸ್ಟೋಯ್ನಿಸ್ ಸಾಥ್ ನೀಡಬೇಕಿದೆ. ರವಿ ಬಿಷ್ನೋಯಿ ದುಬಾರಿಯಾದ್ರೂ ವಿಕೆಟ್ ಪಡೆಯುತ್ತಿದ್ದಾರೆ.
ಪ್ಲೇಯಿಂಗ್ ಇಲೆವೆನ್
ಕೆ.ಎಲ್.ರಾಹುಲ್
ಕ್ವಿಂಟನ್ ಡಿ ಕಾಕ್
ದೀಪಕ್ ಹೂಡಾ
ಕೃನಾಲ್ ಪಾಂಡ್ಯ
ಮಾರ್ಕಸ್ ಸ್ಟೋನಿಸ್
ಆಯುಷ್ ಬಡೋನಿ
ಜೇಸನ್ ಹೋಲ್ಡರ್
ಕೃಷ್ಣಪ್ಪ ಗೌತಮ್
ದುಷ್ಮಂತ ಚಮೀರಾ
ಮೊಹ್ಸಿನ್ ಖಾನ್
ರವಿ ಬಿಷ್ಣೋಯ್
LSG vs KKR Match Lucknow Super Giants Team Playing 11