IPL 2022 | ಐಪಿಎಲ್ ನಲ್ಲಿ ಕೆ.ಎಲ್.ರಾಹುಲ್ ಕೆಟ್ಟ ದಾಖಲೆ
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ತಮ್ಮ ಹೆಸರಿನಲ್ಲಿ ಕೆಟ್ಟ ದಾಖಲೆಯನ್ನು ನಮೂದಿಸಿದ್ದಾರೆ.
ಒಂದೇ ಐಪಿಎಲ್ ಸೀಸನ್ ದಲ್ಲಿ ಮೊದಲ ಎಸೆತಕ್ಕೆ ಎರಡು ಬಾರಿ ಔಟ್ ಆದ ಮೂರನೇ ಆಟಗಾರ ರಾಹುಲ್.
ಇಂಡಿಯಲ್ ಪ್ರಿಮಿಯರ್ ಲೀಗ್ ನ ಭಾಗವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಟ್ರೆಂಟ್ ಬೋಲ್ಟ್ ಎಸೆದ ಮೊದಲ ಬಾಲ್ ನಲ್ಲಿಯೇ ರಾಹುಲ್ ಕ್ಲೀನ್ ಬೌಲ್ಡ್ ಆಗಿದ್ದಾರೆ.
ಇದಕ್ಕೂ ಮುನ್ನಾ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಮೊದಲ ಬಾಲಿಗೆ ರಾಹುಲ್ ಔಟ್ ಆಗಿದ್ದರು.
ಇದರೊಂದಿಗೆ ಒಂದು ಕೆಟ್ಟ ದಾಖಲೆಯನ್ನು ರಾಹುಲ್ ನಿರ್ಮಿಸಿದ್ದಾರೆ.
ಈ ಕೆಟ್ಟ ದಾಖಲೆಯ ಪಟ್ಟಿಯಲ್ಲಿ ಕೆ.ಎಲ್ ರಾಹುಲ್ ಗಿಂತ ಮೊದಲು ಸನತ್ ಜಯಸೂರ್ಯ, ಉನ್ಮುಕ್ತ್ ಚಂದ್ ಇದ್ದಾರೆ.
2009 ರಲ್ಲಿ ಮುಂಬೈ ಪರ ಆಡಿದ್ದ ಸನತ್ ಮೊದಲ ಎಸೆತಕ್ಕೆ 2 ಬಾರಿ ಔಟ್ ಆಗಿದ್ದರು. 2013ರಲ್ಲಿ ಉನ್ಮುಕ್ತ್ ಚಂದ್ ಇದೇ ರೀತಿ ಔಟ್ ಆಗಿದ್ದಾರೆ. ipl-2022-kl-rahul-joins-unwanted-list









