ಮಸೀದಿಗಳ ಮೈಕ್ ಗೆ ವಿರೋಧ | ನಾಳೆಯಿಂದ ದೇವಸ್ಥಾನಗಳಲ್ಲಿ ಮಂತ್ರ ಘೋಷ
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್, ಹಲಾಲ್, ವಿವಾದದ ಬಳಿಕ ಆಜಾನ್ ವಿವಾದ ಬುಗಿಲೆದ್ದಿದ್ದು, ಆಜಾನ್ ನನ್ನು ಧ್ವನಿವರ್ದಕಗಳಲ್ಲಿ ಹೇಳದಂತೆ ವಿರೋಧ ವ್ಯಕ್ತವಾಗುತ್ತಿದೆ.
ಈ ಸಂಬಂಧ ಆಜಾನ್ ಗೆ ವಿರೋಧವಾಗಿ ನಾಳೆಯಿಂದ ಬೆಳಗ್ಗೆ 5 ಹಿಂದೂ ದೇವಾಲಯಗಳಲ್ಲಿ, ಮಠಗಳಲ್ಲಿ ಹನುಮಾನ್ ಚಾಲೀಸಾ, ಭಜನೆ ಹಾಗೂ ಸುಪ್ರಭಾತವನ್ನು, ಮೈಕ್ ಮೂಲಕ ಪಠಿಸುವ ಆಂದೋಲನಕ್ಕೆ ಶ್ರೀರಾಮ ಸೇನೆ ಮುಂದಾಗಿದೆ. ಹಾಗೆ ಈ ಅಭಿಯಾನಕ್ಕೆ ಕೈಜೋಡಿಸುವಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಶ್ರೀರಾಮ ಸೇನೆ ಕಾರ್ಯಕರ್ತರು ಮನವಿ ಮಾಡುತ್ತಿದ್ದಾರೆ.
ಇನ್ನೂ ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಪ್ರಮುಖ ದೇವಸ್ಥಾನ ಮತ್ತು ಮಠಗಳಿಗೆ ಭೇಟಿ ನೀಡಿದ ಶ್ರೀರಾಮಸೇನೆ ಸದಸ್ಯರು ಬೆಳಗ್ಗಿನ ಜಾವ ದೇವಸ್ಥಾನ ಮತ್ತು ಮಠದ ಮೈಕ್‍ನಲ್ಲಿ ಸುಪ್ರಭಾತ, ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಹಾಕುವಂತೆ ಮನವಿ ಪತ್ರ ನೀಡುತ್ತಿದ್ದಾರೆ.
ಹಾಗೇ ಹಾಸನದಲ್ಲೂ ಅಭಿಯಾನಕ್ಕೆ ಕೈ ಜೋಡಿಸಲಿದ್ದು, ಪ್ರತಿನಿತ್ಯ ಮೈಕ್ ಮೂಲಕ ಭಜನೆ ಮಾಡುವುದಾಗಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ತಿಳಿಸಿದರು.
ಇತ್ತ ಆಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಹಾಗೂ ಭಕ್ತಿಗೀತೆ ಮೊಳಗಿಸುವ ಅಭಿಯಾನಕ್ಕೆ ಧಾರವಾಡದಲ್ಲಿ ಬೆಂಬಲ ವ್ಯಕ್ತವಾಗಿದೆ. ಧಾರವಾಡ ನಗರದ ಲೈನ್ ಬಜಾರ್ ಹನುಮಾನ್ ದೇವಸ್ಥಾನ, ನಗರದ ತುಳಜಾ ಭವಾನಿ ದೇವಸ್ಥಾನ, ಶಿವಾಲಯ, ದತ್ತಾತ್ರೇಯ ದೇವಸ್ಥಾನ ಸೇರಿ ಹಲವು ದೇವಸ್ಥಾನ ಕಮಿಟಿಯವರು ನಿರ್ಧರಿಸಿದ್ದಾರೆ.
ಉಡುಪಿಯಲ್ಲೂ ಆಜಾನ್ ವರ್ಸಸ್ ಹನುಮಾನ್ ಚಾಲೀಸಾಗೆ ಬೆಂಬಲ ಸೂಚಿಸಲಾಗಿದೆ. ಒಟ್ಟಿನಲ್ಲಿ ಆಜಾನ್ ಗೆ ವಿರೋಧವಾಗಿ ಶ್ರೀರಾಮ ಸೇನೆ ದೇವಸ್ಥಾನಗಳಲ್ಲಿ ಪ್ರಾರ್ಥನೆ, ಹನುಮಾನ ಚಾಲೀಸಾ ಪಠಿಸಲು ಮುಂದಾಗಿದ್ದು, ಮತ್ತೊಂದು ಧರ್ಮ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.