ಚಿತ್ರದುರ್ಗ: ನಾಯಿ ಕಚ್ಚಿದ ಸ್ಥಿತಿಯಲ್ಲಿ ಅರ್ಧ ದೇಹವಿರುವ ಶಿಶುವಿನ ಶವ ಪತ್ತೆಯಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯಲ್ಲಿ ನಡೆದಿದೆ. ನಗರದ ಚಳ್ಳಕೆರೆ (Challakere) ಗೇಟ್ ಬಳಿಯ ಶಾಲೆ ಆವರಣದಲ್ಲಿ ಅರ್ಧ ದೇಹವಿರುವ ಶವ ಪತ್ತೆಯಾಗಿದೆ. ನಾಯಿ ಕಚ್ಚಿದ ಸ್ಥಿತಿಯಲ್ಲಿ ಶಿಶುವಿನ ಶವ ಪತ್ತೆಯಾಗಿದೆ.
ಖಾಸಗಿ ಆಸ್ಪತ್ರೆ ಆವರಣದಿಂದ ನಾಯಿಗಳು ಶಿಶುವನ್ನು (Infant) ಎಳೆದು ತಂದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಶಿಶುವನ್ನು ಸರಿಯಾಗಿ ಅಂತ್ಯಕ್ರಿಯೆ ನಡೆಸದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..








