MS Dhoni : ನಾವು ಪ್ಲೇ ಆಫ್ಸ್ ಗೆ ಹೋಗಿಲ್ಲ ಅಂದ್ರೆ ಪ್ರಪಂಚ ಅಂತ್ಯಗೊಳ್ಳಲ್ಲ
ಚೆನ್ನೈ ಸೂಪರ್ ಕಿಂಗ್ಸ್ ತಂಡ ತಡವಾಗಿ ಅದ್ಭುತ ಪ್ರದರ್ಶನದೊಂದಿಗೆ ಅಬ್ಬರಿಸುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 91 ರನ್ ಗಳಿಂದ ಜಯ ಸಾಧಿಸಿದೆ.
ಇದು ಐಪಿಎಲ್ ನಲ್ಲಿ ಧೋನಿ ಸೇನೆಯ ನಾಲ್ಕನೇ ಜಯವಾಗಿದೆ. ಆದ್ರೆ ಆರಂಭದಲ್ಲಿ ಸತತವಾಗಿ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಈಗ ಗೆಲುವುಗಳನ್ನು ಕಾಣುತ್ತಿದೆ.
ಆದ್ರೆ ಅದರ ಲಾಭವನ್ನು ಚೆನ್ನೈ ಪಡೆಯುವಲ್ಲಿ ವಿಫಲವಾಗಿದೆ, ಯಾಕಂದರೇ ಚೆನ್ನೈ ಈಗಾಗಲೇ ಪ್ಲೇ ಆಫ್ಸ್ ರೇಸ್ ನಿಂದ ದೂರ ಉಳಿದಿದೆ.
ಈ ಹಿನ್ನೆಲೆಯಲ್ಲಿ ಡೆಲ್ಲಿ ವಿರುದ್ಧದ ಗೆಲುವಿನ ಬಳಿಕ ಧೋನಿ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ.

“ನಾವು ಪ್ಲೇಆಫ್‌ಗೆ ಅರ್ಹತೆ ಪಡೆಯಲಿಲ್ಲ ಅಂದ್ರೆ ಜಗತ್ತು ಮುಳುಗೋಗೊದಿಲ್ಲ ಎಂದಿದ್ದಾರೆ ಧೋನಿ. “ಇದು ಪರಿಪೂರ್ಣ ಆಟ.
ವಾಸ್ತವವಾಗಿ, ಈ ಗೆಲುವನ್ನು ನಾವು ಸ್ವಲ್ಪಬೇಗ ಸಾಧಿಸಿದ್ದರೇ ಚೆನ್ನಾಗಿರುತ್ತಿತ್ತು. ಬ್ಯಾಟರ್ ಗಳು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.
ನಾವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳಲು ಬಯಸಿದ್ದೆವು. ಆದ್ರೆ ನನ್ನ ಮನಸ್ಸಿನಲ್ಲಿ ಟಾಸ್ ಸೋತಿದ್ದು ಒಳ್ಳೆಯದಾಯ್ತು ಅಂತಾ ಅನಿಸುತ್ತಿತ್ತು.
ಆದ್ರೂ ನಮ್ಮ ಬೌಲರ್‌ಗಳು ಪರದಾಡಿದರು. ಸಿಮರ್ಜಿತ್ ಮತ್ತು ಮುಖೇಶ್ ಮತ್ತಷ್ಟು ಪ್ರಬುದ್ಧರಾಗಬೇಕು. ನಾನು ಶಾಲೆಯಲ್ಲಿದ್ದಾಗಿನಿಂದ ಗಣಿತವನ್ನು ಹೆಚ್ಚು ಇಷ್ಟಪಡುತ್ತಿರಲಿಲ್ಲ.
ಇಲ್ಲಿ ಈಗ ಈ ಸಂದರ್ಭಗಳಲ್ಲಿ ರನ್ ರೇಟ್ ಬಗ್ಗೆ ಯೋಚನೆ ಮಾಡುವುದಿಲ್ಲ. ಐಪಿಎಲ್ ಅನ್ನು ಎಂಜಾಯ್ ಮಾಡಬೇಕು ಅಷ್ಟೆ. ನಾವು ಪ್ಲೇ ಆಪ್ಸ್ ಗೆ ಹೋದ್ರೆ ಚೆನ್ನಾಗಿರುತ್ತೆ.
ಒಂದು ವೇಳೆ ಆ ರೀತಿ ಆಗದೇ ಇದ್ದರೇ ಪ್ರಪಂಚ ಅಂತ್ಯವಾಗುವುದಿಲ್ಲ ಎಂದಿದ್ದಾರೆ ಧೋನಿ.ms-dhoni-not-end-world-if-csk-did-not-qualify-playoffs








