SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಸಿಗಲಿದೆ ಶೇ.10 ಕೃಪಾಂಕ
SSLC ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಫೇಲ್ ಆಗುವ ಸಂದರ್ಭವನ್ನು ಕಡಿಮೆ ಮಾಡಲು ಶೇ.10 ಕೃಪಾಂಕ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.
ಆದರೆ ಇಲ್ಲೊಂದು ಕಂಡಿಷನ್ ಅಪ್ಲೆ ಆಗಲಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಈ ಕೃಪಾಂಕ ಸಿಗುವುದಿಲ್ಲ. ಯಾವ ವಿದ್ಯಾರ್ಥಿಗೆ ಮೂರು ವಿಷಯಗಳಿಗೆ ಅನ್ವಯವಾಗುವಂತೆ ಒಟ್ಟು ಶೇ.10 ಅಂಕ ನೀಡಿದರೆ ಪಾಸ್ ಆಗಬಹುದೋ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಕೃಪಾಂಕ ಭಾಗ್ಯ ಸಿಗಲಿದೆ.
ಮೌಲ್ಯಮಾಪನದ ಬಳಿಕ ಶೇ.10 ಕೃಪಾಂಕ ನೀಡಿದರೆ ಯಾವ ವಿದ್ಯಾರ್ಥಿ ಪಾಸ್ ಆಗಬಲ್ಲನೋ ಅಂತಹ ವಿದ್ಯಾರ್ಥಿಗೆ ಥಿಯರಿಯಲ್ಲಿ ಫೇಲ್ ಆದ 3 ಸಬ್ಜೆಕ್ಟ್ ಗೆ ಅನ್ವಯವಾಗುವಂತೆ ಶೇಕಡ 10 ರಷ್ಟು ಕೃಪಾಂಕ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಿದಾಗ ವಿದ್ಯಾರ್ಥಿ ಉತ್ತಿರ್ಣವಾಗುವುದಾದರೆ ಮಾತ್ರ ಅಂತಹ ವಿದ್ಯಾರ್ಥಿಗೆ ಮಾತ್ರ ಶೇ.10 ಕೃಪಾಂಕ ನೀಡಲು ಶಿಕ್ಷಣ ಇಲಾಖೆ ಚಿಂತಿಸುತ್ತಿದೆ.








