ಬೆಂಗಳೂರು : ದೇಶವನ್ನು ಕೊರೊನಾ ಸಂಕಷ್ಟದಿಂದ ಪಾರು ಮಾಡಲು ಲಾಕ್ ಡೌನ್ ಮಾಡಲಾಗಿತ್ತು. ಲಾಕ್ ಡೌನ್ ವೇಳೆಯಲ್ಲಿ ಬಂದ್ ಮಾಡಿರುವ ಅಂತರ್ ರಾಜ್ಯ ಬಸ್ ಸಂಚಾರವನ್ನು ಲಾಕ್ ಡೌನ್ ಸಡಿಲ ಮಾಡಿದರೂ ಪ್ರಾರಂಭ ಮಾಡಿಲ್ಲ. 4.0 ಲಾಕ್ ಡೌನ್ ಸಡಿಲಗೊಂಡ ಬಳಿಕ ಅಂತರ್ ರಾಜ್ಯ ಸಂಚಾರ ವ್ಯವಸ್ಥೆಯಲ್ಲಿ ಕೆಲ ಗೊಂದಲಗಳು ಸೃಷ್ಠಿಯಾಗಿದ್ದವು.
ಅಲ್ಲದೆ ರಾಜ್ಯಕ್ಕೆ ಬರುವ ವಿಮಾನ ಮತ್ತು ರೈಲುಗಳಿಗೆ ನಿಷೇಧ ಹೇರಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವಿಚಾರಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕಕ್ಕೆ ಬರುವ ಯಾವುದೇ ವಿಮಾನ ಮತ್ತು ರೈಲುಗಳಿಗೆ ನಿಷೇಧ ಹೇರಿಲ್ಲ. ಆದರೆ ಕೋವಿಡ್ 19 ಗೆ ಸಂಬಂಧಿಸಿದಂತೆ ಹೆಚ್ಚು ಅಪಾಯಕಾರಿ ಸ್ಥಾನದಲ್ಲಿರುವ ರಾಜ್ಯಗಳಿಂದ ಬರುವ ವಿಮಾನಗಳ ಸಂಖ್ಯೆಯನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಹಾಗೆಯೇ ಅಪಾಯಕಾರಿ ರಾಜ್ಯಗಳಿಂದ ರಸ್ತೆ ಸಂಚಾರದ ಮೂಲಕ ಬರುವ ವಾಹನಗಳ ಮೇಲಿನ ಈಗಿನ ನಿರ್ಬಂಧ ಮುಂದುವರಿಸಲಾಗುತ್ತದೆ. ಜೊತೆಗೆ ರೈಲುಗಳು ಎಂದಿನಂತೆ ಸಂಚರಿಸಲಿವೆ ಎಂದು ಹೇಳಿದ್ದಾರೆ.








