Vikram : ವಿಕ್ರಮ್ ಸಿನಿಮಾದಲ್ಲಿ ಹೀರೋ ಸೂರ್ಯ.. ಸತ್ಯಾಸತ್ಯತೆ ಏನು..?
ಯೂನಿವರ್ಸಲ್ ಹೀರೋ ಕಮಲ್ ಹಾಸನ್, ವಿಲಕ್ಷಣ ನಟ ವಿಜಯ್ ಸೇತುಪತಿ ಮತ್ತು ನಟ ಫಹಾದ್ ಫಾಜಿಲ್ ನಟಿಸಿರುವ ಸಿನಿಮಾ ‘ವಿಕ್ರಮ್‘.
ಚಿತ್ರವನ್ನು ಲೋಕೇಶ್ ಕನಕರಾಜು ನಿರ್ದೇಶಿಸಿದ್ದಾರೆ. ಕಮಲ್ ಅವರ ಸ್ವಂತ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಇಂಟರ್ ನ್ಯಾಶನಲ್ ಫಿಲಂಸ್ ನ ಬ್ಯಾನರ್ ನಲ್ಲಿ ಅದ್ಧೂರಿ ಬಜೆಟ್ ನಲ್ಲಿ ಮೂಡಿಬಂದಿರುವ ಈ ಸಿನಿಮಾ ಜೂನ್ 3ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಈ ಹಿನ್ನೆಲೆಯಲ್ಲಿ ಭಾನುವಾರ (ಮೇ 15) ಟ್ರೇಲರ್ ಬಿಡುಗಡೆಯಾಗಿದೆ. 2 ನಿಮಿಷ 38 ಸೆಕೆಂಡ್‌ಗಳ ಈ ಟ್ರೇಲರ್‌ನಲ್ಲಿ ಕಮಲ್, ವಿಜಯ್ ಮತ್ತು ಫಹಾದ್ ಫಾಜಿಲ್ ಕಾಣಿಸಿಕೋಮಡಿದ್ದಾರೆ.

ಈ ಸಿನಿಮಾದಲ್ಲಿ ಸ್ಟಾರ್ ಹೀರೋ ಸೂರ್ಯ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಕಾಲಿವುಡ್ ನಲ್ಲಿ ಹರಿದಾಡುತ್ತಿದೆ.
ಈ ಸುದ್ದಿಗೆ ನಿರ್ದೇಶಕ ಲೋಕೇಶ್ ಕನಕರಾಜು ಪ್ರತಿಕ್ರಿಯಿಸಿದ್ದಾರೆ. ಸಿನಿಮಾದಲ್ಲಿ ಈ ಮೂವರು ಸ್ಟಾರ್ ಹೀರೋಗಳ ಜೊತೆಗೆ ಸೂರ್ಯ ಕೂಡ ನಟಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿನಿಮಾದಲ್ಲಿ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೇ 15 ರಂದು ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ವಿಕ್ರಮ್ ಸಿನಿಮಾದಲ್ಲಿ ಸೂರ್ಯ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಲೋಕೇಶ್ ಹೇಳಿದ್ದಾರೆ. vikram-lokesh-kanagaraj-confirms-suriya-cameo-kamal-haasan








