Stock Makret – ಸೆನ್ಸೆಕ್ಸ್, ನಿಫ್ಟಿ ಜಿಗಿತ ಪ್ರಭಾವ ಬೀರದ LIC ಪ್ಲಾಫ್ ಲಿಸ್ಟಿಂಗ್
ವಾರದ ಎರಡನೇ ವಹಿವಾಟಿನ ದಿನವಾದ ಮಂಗಳವಾರ, ಷೇರು ಮಾರುಕಟ್ಟೆ ಏರಿಕೆಯೊಂದಿಗೆ ಪ್ರಾರಂಭವಾಯಿತು. ಅಂತಿಮವಾಗಿ ಲಾಭದೊಂದಿಗೆ ಮುಕ್ತಾಯವಾಗಿದೆ. ವಿಶೇಷವೆಂದರೆ ದೇಶದ ಅತಿ ದೊಡ್ಡ ಎಲ್ ಐಸಿ ಐಪಿಒ ಪ್ಲಾಫ್ ಲಿಸ್ಟಿಂಗ್ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಲಿಲ್ಲ ಎನ್ನುವುದು.
ಮುಂಬೈ ಷೇರುಪೇಟೆಯ 30-ಷೇರುಗಳ ಸೆನ್ಸೆಕ್ಸ್ ಸೂಚ್ಯಂಕವು 1345 ಪಾಯಿಂಟ್ ಅಥವಾ 2.54 ರಷ್ಟು ಏರಿಕೆಯೊಂದಿಗೆ 54,318 ಕ್ಕೆ ಕೊನೆಗೊಂಡರೆ, ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕ 417 ಪಾಯಿಂಟ್ ಅಥವಾ 2.63 ರಷ್ಟು ಏರಿಕೆಯೊಂದಿಗೆ 16,259 ಕ್ಕೆ ಕೊನೆಗೊಂಡಿತು.
ಇದಕ್ಕೂ ಮುನ್ನ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕ 262 ಪಾಯಿಂಟ್‌ಗಳ ಜಿಗಿತದೊಂದಿಗೆ 53,236 ರಲ್ಲಿ ಪ್ರಾರಂಭವಾದರೆ, ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ 87 ಪಾಯಿಂಟ್‌ಗಳನ್ನು ಗಳಿಸಿ 15,929 ಮಟ್ಟದಲ್ಲಿ ವಹಿವಾಟು ಆರಂಭಿಸಿತು.
ಶೇ.7.77ರಷ್ಟು ಕುಸಿದ ಎಲ್ ಐಸಿ ಷೇರುಗಳು
ದೇಶದ ಅತಿ ದೊಡ್ಡ ವಿಮಾ ಕಂಪನಿ ಎಲ್‌ಐಸಿಯ ಷೇರುಗಳು ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ನಿರೀಕ್ಷೆಯಂತೆ ಕಂಪನಿಯ ಷೇರುಗಳು ರಿಯಾಯಿತಿಯಲ್ಲಿ ಲಿಸ್ಟ್ ಆಗಿದ್ದು, ಹೂಡಿಕೆದಾರರು ಮೊದಲ ದಿನವೇ ನಿರಾಸೆ ಅನುಭವಿಸಿದ್ದಾರೆ. ಎಲ್‌ಐಸಿ ಷೇರುಗಳನ್ನು ಬಿಎಸ್‌ಇಯಲ್ಲಿ ರೂ.81.80 ಅಥವಾ ಶೇ.8.62ರ ರಿಯಾಯಿತಿಯಲ್ಲಿ ರೂ.867.20ಕ್ಕೆ ಪಟ್ಟಿಮಾಡಲಾಗಿದೆ. 872 ರೂ ಕುಸಿತದೊಂದಿಗೆ NSE ನಲ್ಲಿ ಪಟ್ಟಿಮಾಡಲಾಗಿದೆ. ಮಾರುಕಟ್ಟೆಯ ಅಂತ್ಯದ ವೇಳೆಗೆ, LI ನ ಷೇರಿನ ಬೆಲೆಯು 875.25 ಕ್ಕೆ 7.77 ರಷ್ಟು ಅಥವಾ 73.75 ರಷ್ಟು ಕಡಿಮೆಯಾಗಿದೆ.








