ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ಭಾರತದ ಅತಿದೊಡ್ಡ ಡ್ರೋನ್ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ಡ್ರೋನ್ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಅವರು ಕಿಸಾನ್ ಡ್ರೋನ್ ಪೈಲೆಟ್ ಗಳ ಜೊತೆಗೆ ಸಂವಾದವನ್ನೂ ನಡೆಸಲಿದ್ದಾರೆ. ಇದೇ ವೇಳೆ ಓಪನ್ ಏರ್ ಡ್ರೋನ್ ಪ್ರದರ್ಶನಗಳನ್ನ ವೀಕ್ಷಿಸಲಿದ್ದಾರೆ.
ಇಂದು ಮತ್ತೆ ನಾಳೆ ( ಮೇ 27 , ಮೇ 28 ) ದೆಹಲಿಯಲ್ಲಿ ‘ ಭಾರತ್ ಡ್ರೋನ್ ಉತ್ಸವ 2022 ‘ ಕಾರ್ಯಕ್ರಮ ನಡೆಯಲಿದೆ..
ಇಂದು ( ಮೇ 28 ) ಬೆಳಿಗ್ಗೆ 10 ಗಂಟೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಮೋದಿ ಅವರು ಡ್ರೋನ್ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.. ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ ಖಚಿತ ಪಡಿಸಿದೆ..
ಅಂದ್ಹಾಗೆ ಈ ಉತ್ಸವದಲ್ಲಿ ಸರ್ಕಾರಿ ಅಧಿಕಾರಿಗಳು , ವಿದೇಶಿ ರಾಜತಾಂತ್ರಿಕರು , ಸಶಸ್ತ್ರ ಪಡೆಗಳು , ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು , ಸಾರ್ವಜನಿಕ ವಲಯದ ಉದ್ಯಮಗಳು , ಖಾಸಗಿ ಕಂಪನಿಗಳು , ಡ್ರೋನ್ ಸ್ಟಾರ್ಟ್ ಅಪ್ ಗಳನ್ನ ಒಳಗೊಂಡ 1600 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 70ಕ್ಕೂ ಹೆಚ್ಚು ಪ್ರದರ್ಶಕರು ಡ್ರೋನ್ ಗಳ ವಿವಿಧ ಬಳಕೆಯ ಪ್ರಕರಣಗಳನ್ನ ಪ್ರದರ್ಶಿಸಲಿದ್ದಾರೆ..








