ಬಾಂಗ್ಲಾಗೆ 1,160 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡುತ್ತಿದೆ ಭಾರತ – ಡಾ.ಎಸ್.ಜೈಶಂಕರ್
ಭಾರತವು ಬಾಂಗ್ಲಾದೇಶಕ್ಕೆ 1,160 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡುತ್ತಿದೆ ಮತ್ತು 1,500 ಮೆಗಾವ್ಯಾಟ್ ಹೆಚ್ಚು ಈಗಾಗಲೇ ಹಂತದಲ್ಲಿದೆ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಶನಿವಾರ ಹೇಳಿದ್ದಾರೆ.
“NADI (ನದಿ) ಕಾನ್ಕ್ಲೇವ್ 2022” ಅನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವರು ಭಾರತ ಬಾಂಗ್ಲಾದೇಶದ ರಸ್ತೆ ಯೋಜನೆಗಳಿಗೆ ಸಹಕರಿಸುತ್ತಿದೆ, ಅಶುಗಂಜ್ ನದಿಯ ಬಂದರು-ಅಖೌರಾ ಲ್ಯಾಂಡ್ ಪೋರ್ಟ್ ರಸ್ತೆಯನ್ನು $400 ಮಿಲಿಯನ್‌ಗಿಂತಲೂ ಹೆಚ್ಚಿನ ಎಲ್‌ಒಸಿ ಅಡಿಯಲ್ಲಿ ಸುಧಾರಿಸಲಾಸಗುವುದು ಎಂದು ತಿಳಿಸಿದರು.
“ಬಾಂಗ್ಲಾದೇಶದೊಂದಿಗೆ ತ್ರಿಪುರದ ರಸ್ತೆ ಸಂಪರ್ಕ ಕಲ್ಪಿಸುವ ಭಾರತ-ಬಾಂಗ್ಲಾದೇಶದ ಗಡಿಯಲ್ಲಿರುವ ಬರುರ್‌ಹಟ್‌ನಿಂದ ರಾಮಗಢ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಯೋಜನೆಯು $ 80.06 ಮಿಲಿಯನ್‌ನ ಮತ್ತೊಂದು ಎಲ್‌ಒಸಿ ಅಡಿಯಲ್ಲಿ ಕಾರ್ಯಗತಗೊಳ್ಳುತ್ತಿದೆ” ಎಂದು ಅವರು ಹೇಳಿದರು.
ಗಡಿಯಲ್ಲಿರುವ 28 ಅಧಿಸೂಚಿತ ಭೂ ಕಸ್ಟಮ್ಸ್ ಸ್ಟೇಷನ್ (ಎಲ್‌ಸಿಎಸ್) ಮತ್ತು ಮೂರು ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ) ಗಳನ್ನು ಬಳಸಿಕೊಂಡು ಸರಕುಗಳ ಭೂಪ್ರದೇಶದ ಸಾಗಣೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶಿಲ್ಲಾಂಗ್ ಮೂಲದ ಥಿಂಕ್ ಟ್ಯಾಂಕ್ ‘ಏಷ್ಯನ್ ಕನ್ಫ್ಲೂಯೆನ್ಸ್’ ಆಯೋಜಿಸಿದ್ದ “NADI ಕಾನ್ವ್ಲೇವ್-2022” ನಲ್ಲಿ ಭಾಗವಹಿಸಿದ್ದರು.








