ನಾನು ಔಟಾಗಿದ್ದೇನಾ… ಇಲ್ಲ ಬ್ರದರ್.. ಎಲ್ಲಾ ಆ ಮುಷ್ತಾಕ್ ಅಹಮ್ಮದ್‍ನ ನಾಲಗೆ..! ಯಾರು ಯಾರಿಗೆ ಹೇಳಿದ್ದು…?
ಹೇಗೆ, ಕ್ರಿಕೆಟ್ ಆಟವನ್ನು ಜಂಟಲ್‍ಮೆನ್ ಗೇಮ್ ಅಂತಾರೆ. ಹಾಗೇ ವಿಶ್ವ ಕ್ರಿಕೆಟ್ ನ ಸ್ಟೈಲೀಶ್ ಆಟಗಾರ, ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಜಂಟಲ್‍ಮೆನ್ ಕ್ರಿಕೆಟಿಗ. ಕ್ಲಾಸ್ ಆಟಗಾರನಾಗಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಬದ್ಧತೆ ಬಗ್ಗೆ ಎಷ್ಟು ಹೇಳಿದ್ರೂ ಸಾಕಾಗಲ್ಲ. ಅವರ ಕ್ರಿಕೆಟ್ ಬದ್ಧತೆ, ಏಕಾಗ್ರತೆ, ಕಠಿಣ ಶ್ರಮ, ಕ್ರಿಕೆಟ್ ಮೇಲಿನ ಪ್ರೀತಿಯ ಒಂದೊಂದು ಕ್ಷಣಗಳು ಕೂಡ ಯುವ ಆಟಗಾರರಿಗೆ ಪಾಠದಂತೆ ಭಾಸವಾಗಲೇಬೇಕು.
ಇಂತಹ ಅಪ್ರತಿಮ ಆಟಗಾರನ ಬಗ್ಗೆ ವಿಶ್ವ ಕ್ರಿಕೆಟ್ ಕೂಡ ಸಲಾಂ ಅನ್ನುತ್ತಿದೆ. ತಾಳ್ಮೆಯ ಇನ್ನೊಂದು ರೂಪವೇ ರಾಹುಲ್ ದ್ರಾವಿಡ್. ಕ್ರಿಕೆಟ್ ಬದುಕಿನಲ್ಲಿ ಎಂದಿಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿಲ್ಲ. ಸಿಟ್ಟಿನಿಂದ ಯಾವತ್ತೂ ಎದುರಾಳಿ ತಂಡ ಹಾಗೂ ಕ್ರಿಕೆಟ್‍ಗೆ ಅಪಮಾನ ಮಾಡಲಿಲ್ಲ. ಕೆಲವೊಂದು ಬಾರಿ ಎದುರಾಳಿ ಆಟಗಾರರು ಹಾಗೂ ಬೌಲರ್‍ಗಳು ವಾಕ್ಸಮರ ನಡೆಸಿದ್ರೂ ಕ್ಯಾರೇ ಅನ್ನುತ್ತಿರಲಿಲ್ಲ. ಯಾಕಂದ್ರೆ ಕ್ರಿಕೆಟ್ ಅಂದ್ರೆ ಬ್ಯಾಟ್ ಮತ್ತು ಚೆಂಡಿನ ಸಮರ ಅನ್ನೋದನ್ನು ದ್ರಾವಿಡ್ ಚೆನ್ನಾಗಿ ಅರಿತುಕೊಂಡಿದ್ರು.
ಇದೀಗ ದ್ರಾವಿಡ್ ಎಷ್ಟು ಮುಗ್ದರು ಅನ್ನೋದನ್ನು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ನೆನಪು ಮಾಡಿಕೊಂಡಿದ್ದಾರೆ. ಅದು 1996ರ ಶಾರ್ಜಾಕಪ್ ಕ್ರಿಕೆಟ್ ಟೂರ್ನಿ. ಬಹುಶಃ ಅದು ದ್ರಾವಿಡ್ ಅವರ ಮೂರನೇ ಏಕದಿನ ಪಂದ್ಯ. ಆ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಮುಷ್ತಾಕ್ ಅಹಮ್ಮದ್ ಬೌಲಿಂಗ್ ನಲ್ಲಿ ಕ್ಯಾಚ್ ಔಟ್ ಆಗ್ತಾರೆ. ಆದ್ರೆ ನಿಜವಾಗಿ ಚೆಂಡು ದ್ರಾವಿಡ್ ಬ್ಯಾಟ್‍ಗೆ ತಾಗಿರಲಿಲ್ಲ. ಆದ್ರೆ ಮುಷ್ತಾಕ್ ಅಹಮ್ಮದ್ ಅವರ ಮನವಿಗೆ ಅಂಪೈರ್ ಔಟ್ ಅಂತ ತೀರ್ಮಾನ ನೀಡಿದ್ರು. ಆದ್ರೆ ದ್ರಾವಿಡ್ ನಾಟೌಟ್. ಆದ್ರೂ ದ್ರಾವಿಡ್ ಅಂಪೈರ್ ತೀರ್ಮಾನಕ್ಕೆ ಬದ್ಧರಾಗಿ ಪೆವಿಲಿಯನ್‍ಗೆ ಹಿಂತಿರುಗಿದ್ರು.
ಬಹುಶಃ ದ್ರಾವಿಡ್‍ಗೆ ಅಸಮಾಧಾನವಾಗಿತ್ತು. ಯಾಕಂದ್ರೆ ದ್ರಾವಿಡ್ ಯಾವ ರೀತಿ ಔಟ್ ಆದ್ರು ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ತಾರೆ. ತನ್ನ ತಪ್ಪು ಅರಿವಾಗುವ ತನಕ ದ್ರಾವಿಡ್ ಅದೇ ಯೋಚನೆಯಲ್ಲೇ ಇರುತ್ತಾರೆ. ಹೀಗಾಗಿ ಪಂದ್ಯ ಮುಗಿದ ಬಳಿಕ ದ್ರಾವಿಡ್ ಸೀದಾ ಹೋಗಿದ್ದು ರಶೀದ್ ಲತೀಫ್ ಬಳಿ.
ಹೌದು, ದ್ರಾವಿಡ್ ಪಂದ್ಯ ಮುಗಿದ ಬಳಿಕ ನನ್ನ ಬಳಿ ಬಂದಿದ್ದರು. ಅಲ್ಲದೆ ನಾನು ಔಟಾಗಿದ್ದೇನಾ ಅಂತ ಕೇಳಿದ್ರು. ಅದಕ್ಕೆ ನಾನು ಹೇಳಿದ್ದೆ ಇಲ್ಲ ಬ್ರದರ್ ಅಂತ. ಆದ್ರೆ ನಮ್ಮ ಮುಷ್ತಾಕ್ ಅಹ್ಮದ್ ನಾಲಿಗೆ ಸರಿ ಇಲ್ಲ. ಸದಾ ಅಪೀಲ್ ಮಾಡ್ತಾ ಇರುತ್ತಾರೆ ಎಂದು ಹೇಳಿದ್ದೆ ಅಂತ ರಶೀದ್ ಲತೀಫ್ ದ್ರಾವಿಡ್ ನ ಮುಗ್ದತೆ ಮತ್ತು ಕ್ರಿಕೆಟ್ ಮೇಲಿನ ಪ್ರೀತಿಯನ್ನು ನೆನಪು ಮಾಡಿಕೊಂಡ್ರು. ಹಾಗೇ ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು. ಪಾಕಿಸ್ತಾನ 273 ರನ್ ದಾಖಲಿಸಿದ್ರೆ, ಭಾರತ 233 ರನ್‍ಗಳಿಗೆ ಸರ್ವಪತನಗೊಂಡಿತ್ತು. ಮುಷ್ತಾಕ್ ಅಹಮ್ಮದ್ ಮೂರು ವಿಕೆಟ್ ಕಬಳಿಸಿದ್ರು.
ಹಾಗೇ ರಶೀದ್ ಲತೀಫ್ ಅವರು ದ್ರಾವಿಡ್ ಮತ್ತು ಗಂಗೂಲಿಯವರ ಚೊಚ್ಚಲ ಟೆಸ್ಟ್ ಪಂದ್ಯವನ್ನು ನೆನಪು ಮಾಡಿಕೊಂಡ್ರು. ಇಂಗ್ಲೆಂಡ್ ವಿರುದ್ಧ ಗಂಗೂಲಿ ಶತಕ ಸಿಡಿಸಿದ್ರೆ, ದ್ರಾವಿಡ್ ಕೇವಲ ಐದು ರನ್‍ಗಳಿಂದ ಶತಕ ವಂಚಿತರಾದ್ರು. ಆಗ ನಮ್ಮ ತಂಡದವರು ಇಂಗ್ಲೆಂಡ್ ನಲ್ಲಿದ್ದೇವು. ಪ್ರಧಾನ ಮಂತ್ರಿ ಔತನ ಕೂಟಕ್ಕೆ ಕರೆದಿದ್ದರು. ಆಗ ಇವರಿಬ್ಬರನ್ನು ನಾನು ಭೇಟಿಯಾಗಿದ್ದೆ ಎಂದು ಹೇಳಿಕೊಂಡ್ರು ಲತೀಫ್.
ಇನ್ನು ದ್ರಾವಿಡ್ ವಿಶ್ವ ಕ್ರಿಕೆಟ್ ಮಾಡಿರುವ ಸಾಧನೆಗೆ ರಶೀದ್ ಲತೀಫ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ಒಬ್ಬ ಅದ್ಭುತ ಕ್ರಿಕೆಟಿಗ. ಒಂದು ಬಾರಿ ಯೂನಿಸ್ ಖಾನ್ ಕೂಡ ಹೇಳಿದ್ದ. ದ್ರಾವಿಡ್ ತನ್ನ ಕ್ರಿಕೆಟ್ ಬದುಕನ್ನು ಹೇಗೆ ಬದಲಾಯಿಸಿದ್ದ ಅಂತ. ದ್ರಾವಿಡ್‍ನಲ್ಲಿ ಅದ್ಭುತವಾದ ಕ್ರಿಕೆಟ್ ಶಕ್ತಿ ಇದೆ. ಆತ ನಿಜವಾಗಿಯೂ ಕ್ರಿಕೆಟ್ ಆಡಲು ಹುಟ್ಟಿದವ. ಭಾರತ ಎ ತಂಡ, 19 ವಯೋಮಿತಿ ತಂಡಗಳಿಗೆ ಯಾವ ರೀತಿ ಸುಧಾರಣೆ ಮಾಡಿದ್ದ ಎಂಬುದು ಕಣ್ಣೇದುರಿಗೆ ಇದೆ. ದ್ರಾವಿಡ್ ಕ್ರಿಕೆಟ್‍ಗಾಗಿ ಹುಟ್ಟಿದವರ ಎಂದು ಮತ್ತೊಮ್ಮೆ ಉದ್ಗಾರವೆತ್ತಿದ್ದರು.








