ಸಿಧು ಮುಸೇವಾಲಾ ಹತ್ಯೆ ಪ್ರಕರಣ – ಅಮಿತ್ ಶಾ ಬೇಟಿ ಮಾಡಿದ ಸಿಧು ತಂದೆ ತಾಯಿ…
ಪಂಜಾಬಿ ಗಾಯಕ ಸಿಧು ಮುಸೇವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಮತ್ತು ತಾಯಿ ಸರಪಂಚ ಚರಣ್ ಕೌರ್ ಚಂಡೀಗಢದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿದರು. ಚಂಡೀಗಢ ತಾಂತ್ರಿಕ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ಮುಸೇವಾಲಾ ತಂದೆ ಬಲ್ಕೌರ್ ಅಳಲು ತೋಡಿಕೊಂಡಿದ್ದಾರೆ.
ಸಿಧು ಮುಸೇವಾಲಾ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ಏಜೆನ್ಸಿಯಿಂದ ಮಾಡುವಂತೆ ಕೈ ಜೋಡಿಸಿ ಅಮಿತ್ ಶಾ ಬಳಿ ಮನವಿ ಮಾಡಿದರು. ಈ ಸಮಯದಲ್ಲಿ ಕೇಂದ್ರ ಸಚಿವ ಗಜೇಂದ್ರ ಶೇಖಾವತ್, ರಾಜ್ಯಪಾಲ ಬಿ.ಎಲ್.ಪುರೋಹಿತ್ ಉಪಸ್ಥಿತರಿದ್ದರು.
ಕೊಲೆಯಾಗಿ 6 ದಿನ ಕಳೆದರೂ ಇಲ್ಲಿಯವರೆಗೂ ಹಂತಕ ಪತ್ತೆಯಾಗಿಲ್ಲ. ಮುಸೇವಾಲನನ್ನು ಕೊಂದವರನ್ನೂ ರಾಜಸ್ಥಾನ ಮತ್ತು ಹರಿಯಾಣದವರು ಎಂದು ಹೇಳಲಾಗುತ್ತಿದೆ. ಆದ್ದರಿಂದ ಕೇಂದ್ರ ಏಜೆನ್ಸಿಯಿಂದ ತನಿಖೆ ನಡೆಸಬೇಕು ಸಿಧು ಮೂಸೆವಾಲ ತಂದೆ ಕೇಳಿಕೊಂಡಿದ್ದಾರೆ. ಕುಟುಂಬಕ್ಕೆ ನ್ಯಾಯ ದೊರಕಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ನೆರವು ನೀಡಲಿದೆ ಎಂದು ಗೃಹ ಸಚಿವ ಶಾ ಭರವಸೆ ನೀಡಿದ್ದಾರೆ.
ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ನಿರಾಕರಿಸಿದ ಹೈಕೋರ್ಟ್
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮೂಸೆವಾಲಾ ಹತ್ಯೆ ಪ್ರಕರಣದ ತನಿಖೆಯನ್ನ ಹಾಲಿ ನ್ಯಾಯಾಧೀಶರಿಂದ ಪಡೆಯಲು ನಿರಾಕರಿಸಿದೆ. ಮೂಸೆವಾಲಾ ಅವರ ತಂದೆಯ ಬೇಡಿಕೆಯ ಮೇರೆಗೆ ಪಂಜಾಬ್ ಸರ್ಕಾರವು ಹೈಕೋರ್ಟ್ ರಿಜಿಸ್ಟ್ರಾರ್ಗೆ ಪತ್ರವನ್ನು ಕಳುಹಿಸಿದೆ. ಇಂತಹ ಪ್ರಕರಣದಲ್ಲಿ ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದಲೇ ತನಿಖೆ ನಡೆಸುವಂತೆ ಹೇಳುವುದು ಹಿಂದೆಂದೂ ನಡೆದಿರಲಿಲ್ಲ ಎಂದು ಸರ್ಕಾರಕ್ಕೆ ಹೇಳಿದೆ. ಇದಲ್ಲದೆ, ನ್ಯಾಯಾಧೀಶರ ಕೊರತೆ ಮತ್ತು ಪ್ರಕರಣಗಳ ಬಾಕಿಯನ್ನು ಸಹ ಉಲ್ಲೇಖಿಸಲಾಗಿದೆ.








