ಪನೀರ್ – 400 ಗ್ರಾಂ
ಕಡಲೆ ಹಿಟ್ಟು ಹಿಟ್ಟು – 250 ಗ್ರಾಂ (2 ಸಣ್ಣ ಬಟ್ಟಲುಗಳು)
ಖಾರದ ಪುಡಿ – 1 ಟೀಸ್ಪೂನ್
ಧನ್ಯಾ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಚಾಟ್ ಮಸಾಲಾ – 1 ರಿಂದ 2 ಟೀಸ್ಪೂನ್
ಎಣ್ಣೆ – ಹುರಿಯಲು
ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟನ್ನು ತೆಗೆದುಕೊಳ್ಳಿ , ಅದಕ್ಕೆ ಖಾರದ ಪುಡಿ , ಧನ್ಯಾ ಪುಡಿ, ಒಂದು ಟೇಬಲ್ ಸ್ಪೂನ್ ಎಣ್ಣೆ ಮತ್ತು ಉಪ್ಪು ಸೇರಿಸಿ, ನೀರು ಸೇರಿಸಿ ಮತ್ತು ದಪ್ಪ ಬ್ಯಾಟರ್ ತಯಾರಿಸಿಕೊಳ್ಳಿ.. ಅರ್ಧ ಘಂಟೆಯವರೆಗೆ ಹಾಗೆಯೇ ನೆನೆಯಲು ಬಿಡಿ..
ಪನೀರ್ ಅನ್ನು ಮೀಡಿಯಮ್ ಆಗಿ ನಿಮಗೆ ಬೇಕಾದ ಗಾತ್ರದಲ್ಲಿ ಹೆಚ್ಚಿಕೊಳ್ಳಿ.. ಪ್ರತಿಯೊಂದು ತುಂಡನ್ನ ಮಧ್ಯದಲ್ಲಿ ಸ್ವಲ್ಪ ಕಟ್ ಮಾಡಿಕೊಳ್ಳಿ ,, ರುಚಚಿಗೆ ತಕ್ಕಷ್ಟು ಚಾಟ್ ಮಸಾಲಾ ತುಂಬಿಸಿ.. ಇತ್ತ ಬಾಣಲೆಯಲ್ಲಿ ಎಣ್ಣೆ ಬಿಸಿಗಿಡಿ… ಪನ್ನೀರ್ ತುಂಡುಗಳನ್ನ ಕಡಲೆಹಿಟ್ಟಿನ ಮಿಶ್ರಣನದಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ.. ಕಂದು ಬಣ್ಣಕ್ಕೆ ತಿರುಗುವ ವರೆಗೂ ಮಧ್ಯಮ ಉರಿಯಲ್ಲಿ ಕರಿಯಿರಿ..
ನಂತರ ಪುದೀನಾ ಕೊತ್ತಂಬರಿ ಚಟ್ನಿ ಅಥವ ಟಮೋಟೋ ಕೆಚಪ್ ಜೊತೆಗೆ ಸವಿಯಿರಿ..








