ನಾಳೆ ರಾಜ್ಯದಲ್ಲಿ ಕರ್ಫ್ಯೂ ಇಲ್ಲ, ಎಂದಿನಂತೆ ಇರಲಿದೆ ಜನ ಜೀವನ, ಎಣ್ಣೆ ಕೂಡ ಸಿಗುತ್ತೆ
ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಪ್ರತಿ ಭಾನುವಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿತ್ತು. ಆದರೆ ಇಂದು ದಿಢೀರ್ ತೀರ್ಮಾನ ಕೈಗೊಂಡು ನಾಳಿನ ಕರ್ಫ್ಯೂವನ್ನು ಸರ್ಕಾರ ಕೈ ಬಿಟ್ಟಿದೆ.
ಅಂದರೆ ಭಾನುವಾರ ರಾಜ್ಯದಲ್ಲಿ ಯಾವುದೇ ಕರ್ಫ್ಯೂ ಇರೋದಿಲ್ಲ. ಎಂದಿನಂತೆ ಎಲ್ಲಾ ಚಟವಟಿಕೆಗಳು ಇರಲಿದೆ ಎಂದು ಸಿಎಂ ಕಚೇರಿಯಿಂದ ಅಧಿಕೃತವಾಗಿ ಫೊಷಣೆಯಾಗಿದೆ.
ಇನ್ನು ಪ್ರತಿದಿನದಂತೆ ನಾಳೆ ಬಸ್ ಸಂಚಾರ ಇರುತ್ತೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಎಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಸಂಚಾರ ಮಾಡಲಿದೆ. ಜೊತೆಗೆ ಆಟೋ, ಕ್ಯಾಬ್ ಎಲ್ಲ ಸಂಚಾರ ವ್ಯವಸ್ಥೆ ಕೂಡ ಇರುತ್ತದೆ. ಹೋಟೆಲ್, ಸಲೂನ್, ತರಕಾರಿ, ದಿನಸಿ, ಬ್ಯೂಟಿ ಪಾರ್ಲರ್ ಸೇರಿದಂತೆ ಎಲ್ಲಾ ಅಂಗಡಿಗಳು ತೆರೆದಿರುತ್ತದೆ. ಅದೇ ರೀತಿ ಹೋಟೆಲ್ ನಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೂ ಪಾರ್ಕ್ ತೆರೆದಿರುತ್ತದೆ. ಜೊತೆಗೆ ಮದ್ಯದಂಗಡಿ ಕೂಡ ಓಪನ್ ಆಗುತ್ತದೆ.
ಈ ಹಿಂದೆ ಘೋಷಣೆಯಾಗಿದ್ದ ಸಂಡೆ ಕರ್ಫ್ಯೂ ನಲ್ಲಿ ಈ ಎಲ್ಲವುದಕ್ಕೂ ನಿರ್ಬಂಧ ಏರಲಾಗಿತ್ತು.








