ಸಿದ್ದರಾಮಯ್ಯ ಅವರೇ, ನಿಮ್ಮ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ
ಬೆಂಗಳೂರು : ಮಾನ್ಯ ದಲಿತವಿರೋಧಿಸಿದ್ದರಾಮಯ್ಯ ಅವರೇ, ನಿಮ್ಮ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಕಿಡಿಕಾರಿದೆ.

ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಬಿಜೆಪಿ, ಮಾನ್ಯ #ದಲಿತವಿರೋಧಿಸಿದ್ದರಾಮಯ್ಯ ಅವರೇ, ನಿಮ್ಮ ದಲಿತ ಪರ ಕಾಳಜಿಯ ಪೊರೆ ಕಳಚುತ್ತಿದೆ. √ ದಲಿತ ನಾಯಕ ಪರಮೇಶ್ವರ್ ಅವರನ್ನು ಕುತಂತ್ರದಿಂದ ಸೋಲಿಸಿದಿರಿ. √ ದಲಿತ ಶಾಸಕ ಅಖಂಡ ಮನೆ ಮೇಲೆ ದಾಳಿಯಾದಾಗ, ದಾಳಿ ಮಾಡಿದ ಮತಾಂಧರ ಪರವಾಗಿ ನಿಂತಿರಿ. √ ಈಗ ದಲಿತ ನಾಯಕಿ ಮೋಟಮ್ಮ ಅವರ ಆತ್ಮಕಥನದಲ್ಲಿ ಖಳ ನಾಯಕನಾಗಿದ್ದೀರಿ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರು ಹುಟ್ಟು ನೀಡಿದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಗೆಲ್ಲುವಲ್ಲಿ ಮೋಟಮ್ಮ ಅವರ ಶ್ರಮ ಮಹತ್ವದ್ದು. ಅಂತಹ ಮೋಟಮ್ಮ ಅವರನ್ನು ಕಾಂಗ್ರೆಸ್ ಹೀನಾಮಾನವಾಗಿ ನಡೆಸಿಕೊಂಡಿದೆ. ಇದು ದಲಿತ ಹಾಗೂ ಮಹಿಳಾ ಸಮುದಾಯಕ್ಕೆ ನೀವು ಮಾಡಿದ ಅವಮಾನ.
ದಲಿತ ವರ್ಗದಿಂದ ಬಂದ ಮಹಿಳಾ ನಾಯಕಿ ಮೋಟಮ್ಮ ಅವರ ಬೆಳವಣಿಗೆ ಸಹಿಸದೆ, ಅವರನ್ನು ಮಂತ್ರಿಮಂಡಲದಲ್ಲಿ ತೆಗೆದುಕೊಳ್ಳದೆ, ಅವರನ್ನು @siddaramaiah ಮೂಲೆಗುಂಪು ಮಾಡಿದರು.
ದಲಿತರಿಗೆ ಅನ್ಯಾಯ ಮಾಡುವಾಗ ಸಿದ್ದರಾಮಯ್ಯ ಅವರ ಅಹಿಂದ ಮಂತ್ರ ಎಲ್ಲಿತ್ತು?#ದಲಿತವಿರೋಧಿಸಿದ್ದರಾಮಯ್ಯ
— BJP Karnataka (@BJP4Karnataka) June 12, 2022
ದಲಿತ ವರ್ಗದಿಂದ ಬಂದ ಮಹಿಳಾ ನಾಯಕಿ ಮೋಟಮ್ಮ ಅವರ ಬೆಳವಣಿಗೆ ಸಹಿಸದೆ, ಅವರನ್ನು ಮಂತ್ರಿಮಂಡಲದಲ್ಲಿ ತೆಗೆದುಕೊಳ್ಳದೆ, ಅವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡಿದರು. ದಲಿತರಿಗೆ ಅನ್ಯಾಯ ಮಾಡುವಾಗ ಸಿದ್ದರಾಮಯ್ಯ ಅವರ ಅಹಿಂದ ಮಂತ್ರ ಎಲ್ಲಿತ್ತು.
ಸಿದ್ದರಾಮಯ್ಯ ಕಾಂಗ್ರೆಸ್ ಹೇಗೆ ದಲಿತ ವಿರೋಧಿಯಾಗಿ ಬೆಳೆದಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅವರು ತಮ್ಮ ಆತ್ಮಕಥೆಯಲ್ಲಿ ಕಂಬನಿ ಮಿಡಿದಿದ್ದಾರೆ.
ಮಾನ್ಯ @siddaramaiah ಅವರೇ, ಅಹಿಂದ ರಾಜಕಾರಣದಲ್ಲಿ ಈಗ ದಲಿತರನ್ನು ಹೊರಗಿಟ್ಟಿದ್ದೀರಾ?#ದಲಿತವಿರೋಧಿಸಿದ್ದರಾಮಯ್ಯ
— BJP Karnataka (@BJP4Karnataka) June 12, 2022
ಸಿದ್ದರಾಮಯ್ಯ ಕಾಂಗ್ರೆಸ್ ಹೇಗೆ ದಲಿತ ವಿರೋಧಿಯಾಗಿ ಬೆಳೆದಿದೆ ಎಂದು ಮಾಜಿ ಸಚಿವೆ ಮೋಟಮ್ಮ ಅವರು ತಮ್ಮ ಆತ್ಮಕಥೆಯಲ್ಲಿ ಕಂಬನಿ ಮಿಡಿದಿದ್ದಾರೆ. ಮಾನ್ಯ ಸಿದ್ದರಾಮಯ್ಯ ಅವರೇ, ಅಹಿಂದ ರಾಜಕಾರಣದಲ್ಲಿ ಈಗ ದಲಿತರನ್ನು ಹೊರಗಿಟ್ಟಿದ್ದೀರಾ ಎಂದು ಪ್ರಶ್ನಿಸಿದೆ.








