ಬೆಂಗಳೂರು : ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. 4.0 ಲಾಕ್ ಡೌನ್ ಸಡಿಲಗೊಂಡ ಬಳಿಕ ವಾರದಲ್ಲಿ ಒಂದು ದಿನ ಲಾಕ್ ಡೌನ್ ಮಾಡಲಾಗುವುದು ಎಂದು ಸರ್ಕಾರ ಹೇಳಿತ್ತು. ಇದೀಗ ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಆ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಬಸ್ ಸಂಚಾರಗಳು ಯಥಾಸ್ಥಿತಿಯಲ್ಲಿ ಇರುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಭಾನುವಾರ ಕಂಪ್ಲೀಟ್ ಲಾಕ್ ಡೌನ್ ಇರುವುದಿಲ್ಲ. ಬೆಳ್ಳಿಗೆ 7 ರಿಂದ ಸಂಜೆ 7 ಗಂಟೆವರೆಗೂ ಓಡಾಡಲು ಅವಕಾಶವಿದೆ. ಆದರೆ ಸಂಜೆ 7 ಗಂಟೆಯ ನಂತರ ಕರ್ಫ್ಯೂ ಜಾರಿ ಇರುತ್ತದೆ. ಹಾಗಾಗಿ ನಾಳೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‍ಗಳ ಸೇವೆ ಎಂದಿನಂತೆ ಇರುತ್ತದೆ. ಸಾವರ್ಜನಿಕರ ಸೇವೆಗೆ ನಾಳೆ ಒಟ್ಟು 3500 ಬಸ್ ಗಳು ರಸ್ತೆಗೆ ಇಳಿಯುತ್ತವೆ. ಅಲ್ಲದೆ ಬಿಬಿಎಂಟಸಿ ಬಸ್ ಗಳು ಬೆಂಗಳೂರಿನ ಎಲ್ಲಾ ಕಡೆಗಳಲ್ಲಿ ಸಂಚರಿಸುತ್ತವೆ. ಬಸ್ ಸೌಲಭ್ಯಗಳನ್ನು ಪ್ರಯಾಣಿಕರು ಪಡೆಯಬಹುದು. ಸಂಜೆ 7 ಗಂಟೆಯ ನಂತರದಲ್ಲಿ ಬಸ್ ಸಂಚಾರ ಇರುವುದಿಲ್ಲ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.